ಜಿಪಂ, ತಾಪಂ ಕ್ಷೇತ್ರಗಳಲ್ಲಿ ಬಿಸಿಎಂ `ಎ’ ಗೆ ಮೀಸಲಾತಿ ಕಲ್ಪಿಸಿ

ಜಗಳೂರು, ಫೆ.21- ಮುಂಬ ರುವ ಜಿ.ಪಂ, ತಾಪಂ ಚುನಾವಣೆ ಯಲ್ಲಿ ಹಿಂದುಳಿದ ವರ್ಗದ ಬಿಸಿಎಂ `ಎ’  ಮೀಸಲಾತಿಯಡಿ ಜಿ.ಪಂ ಹಾಗೂ ತಾ.ಪಂ  ಕ್ಷೇತ್ರಕ್ಕೆ‌ ಸ್ಥಾನ ಕಲ್ಪಿಸಲು ಆಗ್ರಹಿಸಿ, ಜಿಲ್ಲಾಧಿಕಾರಿಗೆ ಹಾಗೂ ಶಾಸಕ ಎಸ್.ವಿ. ರಾಮ ಚಂದ್ರ ಅವರಿಗೆ ವಿವಿಧ ಸಮುದಾಯ ಗಳ ಅಹಿಂದ ಸಮುದಾಯದ ಮುಖಂ ಡರುಗಳು ಮನವಿ ಸಲ್ಲಿಸಿದರು.

ತಾಲ್ಲೂಕಿನಲ್ಲಿ ಮುಸ್ಲಿಂ, ಯಾದವ, ಉಪ್ಪಾರ, ಈಡಿಗ, ಪಿಂಜಾರ, ಕುರುಬ, ಗಂಗಾಮತ, ದೊಂಬಿದಾಸ ಸಮುದಾಯಗಳು ಸೇರಿದಂತೆ ಬಿಸಿಎಂ‌, `ಎ’ ಪ್ರವರ್ಗದ ಸುಮಾರು 60 ಸಾವಿರ ಜನಸಂಖ್ಯೆ ಹೊಂದಿದ್ದು, 40 ಸಾವಿರ ಮತದಾರರನ್ನು ಒಳಗೊಂಡಿದೆ. ಆದರೆ, ಗ್ರಾ.ಪಂ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಲ್ಲಿ ಒಂದು ಸ್ಥಾನವೂ ಬಿಸಿಎಂ `ಎ’ ಗೆ ದೊರಕದೆ, ತೀವ್ರ ಅನ್ಯಾಯವಾಗಿದೆ. ಆದ್ದರಿಂದ ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆ ಯಲ್ಲಿ ರೋಸ್ಟರ್ ವಹಿ ಪರಿಶೀಲನೆ ನಡೆಸಿ, ತಾಲ್ಲೂಕಿಗೆ ಬಿಸಿಎಂ `ಎ’ ಮೀಸಲಾತಿಯಡಿ 1 ಜಿ.ಪಂ ಹಾಗೂ 3 ತಾ.ಪಂ ಸ್ಥಾನಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಸ್‌.ವಿ.ರಾಮಚಂದ್ರ, ಹಿಂದುಳಿದ ವರ್ಗದವರಿಗೆ ಮೀಸ ಲಾತಿಯಲ್ಲಿ ಯಾವುದೇ ತೊಂದರೆ ಯಾಗದಂತೆ ಸಾಮಾಜಿಕ ನ್ಯಾಯ ಕಲ್ಪಿಸುವ ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಹಿಂದ ಸಮಾಜದ ಮುಖಂಡರಾದ ಬಿ.ಪಿ.ಸುಭಾನ್, ಷಂಷೀರ್ ಅಹಮ್ಮದ್, ಮಹಮ್ಮದ್ ಅಲಿ, ಗಿಡ್ಡನಕಟ್ಟೆ ಕಾಂತರಾಜ್, ತಿಪ್ಪೇಸ್ವಾಮಿ, ಈ.ಎನ್.ಪ್ರಕಾಶ್, ಬಸವರಾಜ್, ಗಿರೀಶ್ ಒಡೆಯರ್‌, ಕೃಷ್ಣಮೂರ್ತಿ, ಇಂದ್ರೇಶ್, ರಂಗಸ್ವಾಮಿ, ವೀರೇಶ್, ಬಾಲಕೃಷ್ಣ, ತಿಪ್ಪೇಸ್ವಾಮಿ, ಬಸವರಾಜ್ ಮತ್ತಿತರರಿದ್ದರು.

error: Content is protected !!