ಧರ್ಮಸ್ಥಳ ಸಂಸ್ಥೆಯಿಂದ ದೊಡ್ಡೇರಿ ಕೆರೆ ಪುನಃಶ್ಚೇತನ

ಚಳ್ಳಕೆರೆ, ಫೆ. 21- ಸರ್ಕಾರ ಮಾಡದ ಕೆಲಸವನ್ನು ಕ್ಷೇತ್ರ ಧರ್ಮ ಸ್ಥಳ ಸಂಸ್ಥೆ ಮಾಡುತ್ತಿದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಎಸ್. ಜನಾರ್ದನ ಹೇಳಿದರು.

ತಾಲ್ಲೂಕಿನ ದೊಡ್ಡೇರಿ ಗ್ರಾಮದ ಸಮೀಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಿaಣಾಭಿವೃದ್ಧಿ ಬಿ.ಸಿ. ಟ್ರಸ್ಟ್‌ನ ವತಿಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿಯಲ್ಲಿ  308ನೇ ಕೆರೆ ಪುನಃಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ವತಿಯಿಂದ ರಾಜ್ಯದಲ್ಲಿ ಸುಮಾರು 308  ಕೆರೆಗಳು   25 ಕೋಟಿ ರೂ. ವೆಚ್ಚದಲ್ಲಿ ಕೆರೆಗಳನ್ನು ಪುನಃಶ್ಚೇತನ ಗೊಳಿ ಸಲಾಗಿದೆ. ಹಿಂದಿನ ಕಾಲದಲ್ಲಿ  ರಾಜರುಗಳು ನಿರ್ಮಾಣ ಮಾಡಿದ ಹಲವಾರು ಕೆರೆಗ ಳು ಇಂದು ಕಾಣದಾಗಿವೆ. ಇಂತಹ ಕೆರೆಗಳನ್ನು ಗುರುತಿಸಿ ಸ್ವಚ್ಚ ಮಾಡಲಾಗುತ್ತಿದೆ. ಇದರಿಂದ ಹೂಳು ತುಂಬಿದ ಕೆರೆಗಳು  ಸ್ವಚ್ಚ ವಾಗಿ, ಮಳೆ ಬಂದಾಗ ಹೆಚ್ಚಿನ ನೀರು ಸಂಗ್ರಹವಾಗಿ ಜನ-ಜಾನುವಾರು ಗಳಿಗೆ, ರೈತ ಕೃಷಿ ಜಮೀನುಗಳಿಗೆ  ಅನುಕೂಲವಾ ಗುತ್ತದೆ ಎಂದು ಜನಾರ್ದನ ತಿಳಿಸಿದರು. ಶ್ರೀ ಧರ್ಮಸ್ಥಳ  ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ  ಸುಮಾರು 7 ಲಕ್ಷ ರೂ. ವನ್ನು ದೊಡ್ಡೇರಿ ಕೆರೆ ಪುನಃಶ್ಚೇತನಕ್ಕೆ ನೀಡಲಾಗುತ್ತದೆ ಎಂದರು.

ಜನ ಜಾಗೃತಿ ವೇದಿಕೆಯ  ಅಧ್ಯಕ್ಷ ಬಿ.ಸಿ. ಸಂಜೀವಮೂರ್ತಿ ಮಾತನಾಡಿದರು. ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ತಾಲ್ಲೂಕು ಯೋಜನೆ ಅಧಿಕಾರಿ ಲತಾ ಬಂಗೇರ, ಫಕ್ಕೀರಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಗದ್ದಿಗೆ ತಿಪ್ಪೇಸ್ವಾಮಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ  ಗೌರಮ್ಮ, ಪಿಡಿಒ ಪಾಲಯ್ಯ ಮತ್ತಿತರರು ಉಪಸ್ಥಿತರಿದ್ದರು.

error: Content is protected !!