ಮಲೇಬೆನ್ನೂರು, ಜು.11- ಭಾನುವಳ್ಳಿ, ಹೊಳೆಸಿರಿಗೆರೆ, ಭಾನುವಳ್ಳಿ ಮತ್ತು ಬೆಳ್ಳೂಡಿ ಗ್ರಾಮಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬುಧವಾರ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ ಭೇಟಿ ನೀಡಿ, ಕುಟುಂಬ ಕಲ್ಯಾಣ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಸಿಸಿ, ಓಪಿ, ಐಯುಸಿಡಿ ಅಂತರಗಳ ಬಗ್ಗೆ ಡಾ.ರೇಣುಕಾರಾಧ್ಯ ಅವರು ಆಶಾ ಮತ್ತು ಆರೋಗ್ಯ ಕಾರ್ಯ ಕರ್ತರಿಗೆ ಮಾಹಿತಿ ನೀಡಿದರು. ಹೊಳೆಸಿರಿಗೆರೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ವೇಳೆಯಲ್ಲಿ ವೈದ್ಯಾಧಿ ಕಾರಿ ಡಾ.ಚೇತನ್, ತಾ.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ, ಆರೋಗ್ಯ ಸಿಬ್ಬಂದಿಗಳಾದ ಪ್ರಕಾಶ್‌ನಾಯ್ಕ, ಆಶಾ, ಸವಿತಾ, ದೇವರಾಜ್, ಆಶಾ ಕಾರ್ಯಕರ್ತೆಯರಾದ ಮಾಲಾಶ್ರೀ, ಕರಿಬಸಮ್ಮ, ಕಸ್ತೂರಿಬಾಯಿ ಮತ್ತು ದೇವರಾಜ್, ಜಾನ್ ಸನ್ ಈ ವೇಳೆ ಹಾಜರಿದ್ದರು.