ಹಡಗಲಿ : ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಗೆ ಚಾಲನೆ

ಹೂವಿನಹಡಗಲಿ, ಫೆ.19 – ತಾಲ್ಲೂಕಿನ ಸುಕ್ಷೇತ್ರ ಮೈಲಾರದಲ್ಲಿ ರಥಸಪ್ತಮಿ ದಿನವಾದ ಶುಕ್ರವಾರ ಕಾರಣಿಕ ನುಡಿಯುವ ಗೊರವಯ್ಯಗೆ ಕಂಕಣ ಕಟ್ಟುವ ಮೂಲಕ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಗೆ ಚಾಲನೆ ನೀಡಲಾಯಿತು. 

ಮೈಲಾರ ದೇವಸ್ಥಾನದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್‍ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ಪ್ರಾಂಗಣದಲ್ಲಿ ಅರ್ಚಕ ಪ್ರಮೋದ್ ಭಟ್‍ರ ಮಂತ್ರಘೋಷ ಹಾಗೂ ಪೂಜಾ ವಿಧಿ, ವಿಧಾನಗಳೊಂದಿಗೆ ಕಾರಣಿಕ ತದನಂತರ ಹಾಲು ಉಕ್ಕಿಸುವ ಕಾರ್ಯಕ್ರಮ ನಡೆಯಿತು. ಹಾಲು ಯಾವ ಭಾಗದಲ್ಲಿ ಉಕ್ಕುತ್ತದೆೇಯೋ ಆ ಕಡೆ ಸಮೃದ್ದ ಮಳೆ ಬೆಳೆ ಆಗುವುದು ಎಂಬ ಪ್ರತೀತಿ ಇದೆ. ಅದರಂತೆ ಈ ಬಾರಿ ಹೊಳಲು ಭಾಗದ ಕಡೆೆಗೆ ಬೆಳೆ ಆಗಲಿದೆ ಎಂದು ಅರ್ಚಕರು ತಿಳಿಸಿದರು.

ಈ ವೇಳೆ ನೆರೆದ ಭಕ್ತರರು ಏಳುಕೋಟಿ, ಏಳುಕೋಟಿಗೆ ಚಾಂಗಮಲೋ ಎಂದು ಜಯ ಘೋಷ ಕೂಗಿದರು. ಧಾರ್ಮಿಕ ದತ್ತಿ ಪ್ರಾಂಗಣದಲ್ಲಿ ಅರ್ಚಕ ಪ್ರಮೋದ್ ಭಟ್‍ರ ಮಂತ್ರಘೋಷ ಹಾಗೂ ಪೂಜಾ ವಿಧಿವಿಧಾನಗಳೊಂದಿಗೆ ಕಾರಣಿಕ ನುಡಿಯುವ ರಾಮಣ್ಣ ಗೊರವಯ್ಯ ಹಾಗೂ ಬಾಬುದಾರರಿಗೆ ಧರ್ಮಕರ್ತರು ಕಂಕಣಕಟ್ಟಿ ಅಧಿಕೃತವಾಗಿ ಜಾತ್ರೆಗೆ ಚಾಲನೆ ನೀಡಿದರು.

error: Content is protected !!