ಮಹಾತ್ಮರ ಜಯಂತಿಗಳ ಆಚರಣೆಯಿಂದ ಸಮುದಾಯಗಳು ಮುಖ್ಯವಾಹಿನಿಗೆ-ಎಸ್‌ವಿಆರ್‌

ಜಗಳೂರು, ಫೆ.19 – ಸಮುದಾಯಗಳು ಮುಖ್ಯವಾಹಿನಿಗೆ ಬರಲು ಮಹನೀಯರ ಜಯಂತಿಗಳ ಆಚರಣೆಗಳು ಅಗತ್ಯವಾಗಿವೆ ಎಂ ದು ವಾಲ್ಮಿಕಿ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಸವಿತಾ ಮಹರ್ಷಿ, ಛತ್ರಪತಿ ಶಿವಾಜಿ, ಸರ್ವಜ್ಞ ಜಯಂತಿಗಳ ಸರಳ ಆಚರಣೆಯಲ್ಲಿ ಭಾಗವಹಿಸಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಎಲ್ಲಾ ಸಮಾಜಗಳ ಮಹಾ ಪುರುಷರನ್ನು ಜಯಂತಿಗಳಿಗೆ ಸೀಮಿತಗೊಳಿಸದೆ ಅವರ  ಆದರ್ಶಗಳನ್ನು ಮೈಗೂಡಿಸಿಕೊಂಡರೆ ಸಾರ್ಥಕತೆ ಸಿಗುವುದು. ತಾಲ್ಲೂಕಿನಲ್ಲಿ ಎಲ್ಲಾ ಸಮಾಜದವರು ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಜೊತೆಗೆ ಪ್ರಜ್ಞಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಎಂದರು.

ತಾಲ್ಲೂಕಿನ ರೈತರು ಮುಂದಿನ ದಿನಗಳಲ್ಲಿ ಕೇವಲ ಮಳೆಯಾಶ್ರಿತರಾಗದೆ ನೀರಾವರಿ ಸೌಲ ಭ್ಯ ದೊರಕಿಸಿ, ಸಮೃದ್ದಿ ಜೀವನ ಸಾಗಿಸುವ ಕಾಲ ಸನ್ನಿಹಿತವಾಗಿದೆ. ಎಲ್ಲರೂ ಒಗ್ಗೂಡಿ ಜಯಂತಿ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ.ಮಹೇಶ್, ತಾ.ಪಂ ಇಓ ಮಲ್ಲಾನಾಯ್ಕ, ಬಿಇಓ ವೆಂಕಟೇಶ್, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಮಲ್ಲಿಕಾರ್ಜುನ್, ಸತೀಶ್ ರಾಜಣ್ಣ, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಅಜ್ಜಪ್ಪ ನಾಡಿಗರ್, ಆರ್.ಐ. ಕುಬೇಂದ್ರ ನಾಯ್ಕ ಮತ್ತಿತರರಿದ್ದರು.

error: Content is protected !!