ದಾವಣಗೆರೆ, ಫೆ.18- ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತ್ಯೋತ್ಸವದ ಅಂಗವಾಗಿ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ವತಿಯಿಂದ ನಗರದಲ್ಲಿ ಇಂದು ಪುರುಷರ ಮತ್ತು ಮಹಿಳೆಯರ ಬೃಹತ್ ಬೈಕ್ ರಾಲಿ ನಡೆಸಲಾಯಿತು.
ಶಿವಾಜಿ ನಗರದ ಶ್ರೀ ದುರ್ಗಾಂಬಿಕ ದೇವಸ್ಥಾನದಿಂದ ಆರಂಭಗೊಂಡ ಬೈಕ್ ರಾಲಿಗೆ ಸಮಾಜದ ಅಧ್ಯಕ್ಷ ಮಾಲತೇಶ್ ರಾವ್ ಜಾಧವ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಾಟೀಲ್ ಚಾಲನೆ ನೀಡಿದರು.
ರಾಲಿಯು ಕಾಯಿಪೇಟೆ, ವಸಂತ ರಸ್ತೆ, ಪಿ.ಬಿ. ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಂಡದ ವೃತ್ತದಲ್ಲಿ ಸಮಾರೋಪಗೊಂಡಿತು.
ಮುಖಂಡರುಗಳಾದ ಸತ್ಯನಾರಾಯಣ ಜಾಧವ್, ಸೋಮಶೇಖರ್ ಪವಾರ್, ಬಸವರಾಜ್ ಮಾನೆ, ವೈ. ಮಲ್ಲೇಶ್, ಸಂತೋಷ, ಹನುಮಂತ ರಾವ್ ಸುರ್ವೆ, ಗಣೇಶ್ ಸುರ್ವೆ, ಅರುಣ್ ಮಾನೆ, ಶ್ರೀನಿವಾಸ ಪಿಸಾಳೆ ಸೇರಿದಂತೆ ಅನೇಕರು ರಾಲಿಯಲ್ಲಿ ಭಾಗವಹಿಸಿದ್ದರು.