ಕೊರೊನಾ ನಿಯಮಗಳನ್ನು ಪಾಲಿಸಿ

ಸಾರ್ವಜನಿಕರಲ್ಲಿ ಶಾಸಕ ಎಸ್‍.ರಾಮಪ್ಪ ಮನವಿ

ಮಲೇಬೆನ್ನೂರು, ಏ.20 – ದೇಶದಲ್ಲಿ ಕೊರೊನಾ 2ನೇ ಅಲೆ ಬಿರುಗಾಳಿಯಂತೆ ಬೀಸುತ್ತಿದ್ದು, ಸಾರ್ವಜನಿಕರು ಎಚ್ಚರ ವಹಿಸಿ, ಸರ್ಕಾರದ ಸೂಚನೆಗಳನ್ನು ಪಾಲಿಸುವಂತೆ ಶಾಸಕ ಎಸ್‌.ರಾಮಪ್ಪ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ದಿನೇ ದಿನೇ ಏರಿಕೆ ಆಗುತ್ತಿದ್ದು,  ಹರಿಹರ ತಾಲ್ಲೂ ಕಿನಲ್ಲಿ ಪ್ರತಿದಿನ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಆದ್ದರಿಂದ ಸಾರ್ವಜನಿ ಕರು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರಬೇಡಿ, ಅನಿವಾರ್ಯವಾ ದರೆ ಮಾಸ್ಕ್‍ ಧರಿಸಿ ಸ್ಯಾನಿಟೈಸರ್‍ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿರುವ ಶಾಸಕ ರಾಮಪ್ಪ ಅವರು, ಜೀವ ಉಳಿದರೆ ಬದುಕು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳ ಬೇಕು ಎಂದಿದ್ದಾರೆ.

ಲಾಕ್‍ಡೌನ್‍ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂಬ ದೃಷ್ಟಿಯಿಂದ ಸರ್ಕಾರ ಅದರಿಂದ ದೂರವಿದೆ. ಆದರೂ ಸರ್ಕಾರ ಜನರ ಹಿತದೃಷ್ಟಿಯಿಂದ ನೈಟ್‍ ಕರ್ಪ್ಯೂ ಮತ್ತು ಶನಿವಾರ, ಭಾನುವಾರದ ಕರ್ಪ್ಯೂ ಜಾರಿಗೊಳಿಸಲು ತೀರ್ಮಾನಿಸಿರುವುದು ಒಳ್ಳೆಯದು, ಸರ್ಕಾರದ ಮಾರ್ಗಸೂಚಿ ಗಳನ್ನು ಎಲ್ಲರೂ ತಪ್ಪದೇ ಪಾಲಿಸುವ ಮೂಲಕ ಕೊರೊನಾ ಮಹಾಮಾರಿಯನ್ನು ತಡೆಗಟ್ಟೋಣ ಮತ್ತು ಕೋವಿಡ್‍ ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಹಾಕಿಸಿ ಕೊಳ್ಳಬೇಕು. ಮೇ 1 ರಿಂದ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್‍ ಲಸಿಕೆ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ಶಾಸಕ ರಾಮಪ್ಪ ಹೇಳಿದ್ದಾರೆ.

error: Content is protected !!