ಗುಣಾತ್ಮಕ ಶಿಕ್ಷಣಕ್ಕೆ ಸರ್ವರ ಸಹಕಾರ ಅಗತ್ಯ

ಮಲೇಬೆನ್ನೂರು ಅ .4 – ಶಿಕ್ಷಣ ಇಲಾಖೆ ಮಕ್ಕಳಿಗೆ ನೀಡುವ  ಗುಣಾತ್ಮಕ ಶಿಕ್ಷಣಕ್ಕೆ ಸಂಘ -ಸಂಸ್ಥೆಗಳ ಮತ್ತು ಪೋಷಕರ  ಸಹಕಾರ ಅಗತ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್ ಅಭಿಪ್ರಾಯಪಟ್ಟರು.

ಪಟ್ಟಣದ ಬೀರಲಿಂಗೇಶ್ವರ ಬಾಲಕರ ಪ್ರೌಢ ಶಾಲೆಗೆ ಬೆಂಗಳೂರಿನ ಅನಿತಾ ಗುರುರಾಜ್ ಅವರು ಕೊಡುಗೆಯಾಗಿ ನೀಡಿದ 2 ಗಣಕಯಂತ್ರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಬೆಂಗಳೂರಿನ ಸಂಘ-ಸಂಸ್ಥೆಗಳು ಹರಿಹರ ತಾಲ್ಲೂಕಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡುವ ಪೀಠೋಪಕರಣಗಳು, ಬ್ಯಾಗ್‍ಗಳು, ಆಹಾರ ಕಿಟ್, ಫಿಲ್ಟರ್, ಕ್ರೀಡಾ ಸಾಮಾಗ್ರಿಗಳು, ಟಿವಿ, ಗಣಕಯಂತ್ರಗಳು, ನಲಿಕಲಿ ಕೊಠಡಿಗಳ ಅಲಂಕಾರ ಮತ್ತು ವಸ್ತುಗಳನ್ನು ನೀಡುತ್ತಿರುವುದು ಮಕ್ಕಳ ಗುಣಾತ್ಮಕ ಶಿಕ್ಷಣ ಕಲಿಕೆಗೆ ಪ್ರೋತ್ಸಾಹಿಸಿದಂತೆ ಎಂದು ಶ್ಶ್ಲಾಘಿಸಿದರು .

ಬಿಇಓ ಸಿದ್ದಪ್ಪ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತೋರಿದ ಸಂಘ- ಸಂಸ್ಥೆಗಳ ಸ್ಫೂರ್ತಿ ಮತ್ತು ಶಿಕ್ಷಣ ಪ್ರಗತಿ ಮೆಚ್ಚುವಂಥದ್ದಾಗಿದ್ದು ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ  ಹರಿಹರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ  ಸಂಘದ ಕಾರ್ಯದರ್ಶಿ ಶರಣ್‍ಕುಮಾರ್ ಹೆಗಡೆ ಅವರು ಬೆಂಗಳೂರಿನ ಹೆಲ್ಪಿಂಗ್ ಗ್ರೂಪ್, ಟೆಕ್ಸಾಸ್ ಇನೋ ವೇಟಿವ್ ಹಾಗೂ ಸಂಸ್ಥೆಯ ಅನಿತಾ ಗುರುರಾಜ್ ರವರ ಸ್ಪಂದನೆಗೆ ಧನ್ಯವಾದಗಳನ್ನು ತಿಳಿಸಿದರು.

ಬೀರಲಿಂಗೇಶ್ವರ ವಿದ್ಯಾಸಂಸ್ಥೆಯ  ಕಾರ್ಯದರ್ಶಿ ಕರಿಯಪ್ಪ , ಚಿತ್ರದುರ್ಗ ಡಯಟ್ ಪ್ರವಾಚಕ ತಿಪ್ಪೇಶಪ್ಪ, ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಎಸ್.ಬಿ.ಕೆ.ಎಂ ಶಾಲೆಯ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ, ಹನುಮ ರಡ್ಡೇರ, ಬೀರಲಿಂಗೇಶ್ವರ ಬಾಲಕರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸಿ ಜಯಣ್ಣ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!