ಅಂಗನವಾಡಿ ಶಿಕ್ಷಕಿಯರಿಗೆ ಸರ್ಕಾರದ ಸೌಲಭ್ಯಗಳು ಸಕಾಲದಲ್ಲಿ ಒದಗಬೇಕು

ಹರಿಹರ, ಫೆ.17 – ಅಂಗನವಾಡಿ ಶಿಕ್ಷಕಿಯರಿಗೆ ವೇತನ, ನಿವೃತ್ತಿ ವೇತನ ಮತ್ತು ಸರ್ಕಾರದ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆಗಳನ್ನು ಹಾಕುವಂತೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷರಾದ ಬಿ.ಎಸ್. ನಿರ್ಮಲಾ ಹೇಳಿದರು.

ನಗರದ ಶ್ರೀ ಶಕ್ತಿ ಸಮುದಾಯ ಭವನದಲ್ಲಿ ಅಂಗನವಾಡಿ ಕೊಂಡಜ್ಜಿ ವೃತ್ತದಿಂದ ಅಂಗನವಾಡಿ ಶಿಕ್ಷಕಿ ಕೆ.ಟಿ. ಗೀತಾ ಕೊಂಡಜ್ಜಿ ಮೇಲ್ವಿಚಾರಕಿಯಾಗಿ ಬಡ್ತಿ ಹೊಂದಿರುವುದಕ್ಕೆ ಹಾಗೂ ನಿವೃತ್ತಿ ಹೊಂದಿರುವ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರ್ಕಾರ ಈಗಾಗಲೇ ಸರ್ಕಾರ ಅಂಗನವಾಡಿ ಶಿಕ್ಷಕಿಯರಿಂದ ಸಾಕಷ್ಟು ಪ್ರಮಾಣದಲ್ಲಿ ಕೆಲಸವನ್ನು ತೆಗೆದುಕೊಳ್ಳುತ್ತಿದೆ. ಆದರೆ, ಅವರಿಗೆ ಬೇಕಾಗುವ ಸೌಲಭ್ಯಗಳನ್ನು ನೀಡುವಾಗ ಮಾತ್ರ ತಾರತಮ್ಯ ಮಾಡುತ್ತಿದೆ ಎಂದು ಕಿಡಿಕಾರಿದರು.

ಸಿಡಿಪಿಓ ನಿರ್ಮಲಾ ಮಾತನಾಡಿ, ಕೊರೊನಾ ಸಮಸ್ಯೆಯಿಂದ ಕಳೆದ ಹಲವಾರು ದಿನಗಳಿಂದ ಅಂಗನವಾಡಿ ಕೇಂದ್ರಗಳನ್ನು ತೆರೆಯದೆ ಮಕ್ಕಳಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿರುತ್ತದೆ. ಈವಾಗ ಸರ್ಕಾರದಿಂದ ಆದೇಶ ಬಂದಿದ್ದು, ಕೊರೊನಾ ಸಮಸ್ಯೆ ಕಡಿಮೆ ಇರುವುದರಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳನ್ನು ದಿ.3 ರಂದು ಪ್ರಾರಂಭ ಮಾಡಲಾಗುತ್ತದೆ. ಆದ್ದರಿಂದ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಸ್ವಚ್ಛ ಮಾಡಿ ಹಾಗೂ ಸ್ಯಾನಿಟೈಸರ್ ಸಿಂಪಡಣೆ ಮಾಡಿಕೊಂಡು ಸಿದ್ದತೆ ಮಾಡಿಕೊಳ್ಳುವಂತೆ ಮತ್ತು ಪ್ರತಿ ದಿನ ಐದು ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡಲಾಗುತ್ತದೆ. ಯಾವುದೇ ರೀತಿಯ ಊಟದ ವ್ಯವಸ್ಥೆ ಶಾಲೆಯಲ್ಲಿ ಇರುವುದಿಲ್ಲ. ಆದರೆ ಮಕ್ಕಳ ಮನೆಗೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. ಮತ್ತು ಶಾಲೆಯ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವಂತೆ ಹಾಗೂ ಗರ್ಭಿಣಿಯರ ಬಗ್ಗೆ ಸಹ ಅತಿಯಾದ ಕಾಳಜಿಯಿಂದ ಕರ್ತವ್ಯವನ್ನು ನಿರ್ವಹಣೆ ಮಾಡುವುದಕ್ಕೆ ಸರ್ಕಾರ ಹಲವಾರು ನಿಬಂಧನೆಗಳನ್ನು ಹಾಕಿದ್ದು ಅದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತೊಂದರೆ ಆಗದಂತೆ ಕರ್ತವ್ಯ ನಿರ್ವಹಣೆ ಮಾಡಿಕೊಂಡು ಹೋಗುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಿದರು.

ಹೊನ್ನಾಳಿ ಕುಟುಂಬ ಕಲ್ಯಾಣ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಕೆ.ಟಿ. ಗೀತಾ ಕೊಂಡಜ್ಜಿ, ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಲಲಿತಾ ಬೆಳ್ಳೂಡಿ ಮಾತನಾಡಿದರು.

ಈ ವೇಳೆ ಎಸಿಡಿಪಿ ಪ್ರಿಯದರ್ಶಿನಿ, ವೃತ್ತದ ಮೇಲ್ವಿಚಾರಕಿ ಶಾಂತಮ್ಮ ಮಾತನಾಡಿದರು. ಕೆ.ಟಿ. ಗೀತಾ ಕೊಂಡಜ್ಜಿ ಹಾಗೂ ಜಿನತ್ ಉನ್ನೀಸಾ ಕರಲಹಳ್ಳಿ ಇವರಿಗೆ ಸನ್ಮಾನಿಸಿ ಗೌರವಿಸಿದರು.

ಅಂಗನವಾಡಿ ಸಂಘದ ಮುಖಂಡರಾದ ಎಸ್.ಬಿ. ಜ್ಯೋತಿ ಬೆಳ್ಳೂಡಿ, ಸುಜಾತ, ಎಸ್.ಬಿ. ಲಲಿತಾ ಬೆಳ್ಳೂಡಿ, ಶಿಕ್ಷಕಿಯರಾದ ಸಾವಿತ್ರ ಪಾಟೀಲ್, ಎನ್.ಎಸ್. ರೇಣುಕಾ, ಬುಳ್ಳಾಪುರ ಬಸಮ್ಮ, ಅರುಣಾ, ಜಯಮ್ಮ, ಕೆ.ಮಂಜುಳಾ, ಕೆ. ಅಂಜಮ್ಮ, ಎನ್.ಜಿ. ರೇಣುಕಾ, ರುದ್ರಮ್ಮ ಕೊಂಡಜ್ಜಿ, ಚೆನ್ನಮ್ಮ ದೀಟೂರು ಹಾಗೂ ಇತರರು ಹಾಜರಿದ್ದರು.

error: Content is protected !!