ತಹಶೀಲ್ದಾರ್‌ಗೆ ಪಂಚಾಯಿತಿ ಸದಸ್ಯರು-ಪಕ್ಷಗಳ ಮುಖಂಡರ ತರಾಟೆ

ಸಭೆಗೆ ಕರೆದು ಜನಪ್ರತಿನಿಧಿಗಳಿಗೆ ಅವಮಾನ: ಆರೋಪ

ದಾವಣಗೆರೆ, ಫೆ.16- ಸಭೆಗೆ ಬರುವಂತೆ ಜನಪ್ರತಿನಿಧಿಗಳನ್ನು ಕರೆದು ತಹಶೀಲ್ದಾರ್ ಅವಮಾನ ಮಾಡಿರುವುದಾಗಿ ಆರೋಪಿಸಿ ತಹಶೀಲ್ದಾರ್ ಗಿರೀಶ್ ಅವರನ್ನು ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯರು, ವಿವಿಧ ಪಕ್ಷಗಳ ಮುಖಂಡರು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಗರದ ತಾಲ್ಲೂಕು ಕಚೇರಿಯಲ್ಲಿಂದು ಸಂಜೆ ನಡೆದಿದೆ.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ವಿಸ್ತೀರ್ಣ ಭೌಗೋಳಿಕ ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ಗ್ರಾಮಗಳ ಸೇರ್ಪಡೆ ಹಾಗೂ ಕೈ ಬಿಡುವ ಕುರಿತಂತೆ ಚರ್ಚಿಸಲು ಮತ್ತು ಆಕ್ಷೇಪಣೆ ತಕರಾರು ಸಂಬಂಧ ಮುಕ್ತವಾಗಿ ಮಾತನಾಡಲು ತಹಶೀಲ್ದಾರ್ ಕಚೇರಿಗೆ ಸಂಜೆ ಆಗಮಿಸುವಂತೆ ತಾಲ್ಲೂಕಿನ ಬಾಡಾ, ಮಾಯಕೊಂಡ, ಹದಡಿ, ಸೇರಿದಂತೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯರು, ವಿವಿಧ ಪಕ್ಷಗಳ ಮುಖಂಡರಿಗೆ ಸಭೆ ಕರೆಯಲಾಗಿತ್ತು ಎನ್ನಲಾಗಿದೆ. 

ಅದರಂತೆ ಕಾಂಗ್ರೆಸ್ ಮುಖಂಡ ಕೆಂಗೋ ಹನುಮಂತಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸತೀಶ್, ಬಿ.ಟಿ. ಸಿದ್ದಪ್ಪ  ಜಿಲ್ಲಾ ಪಂಚಾಯತ್ ಸದಸ್ಯರಾದ ಹದಡಿ ನಿಂಗಪ್ಪ, ಶೈಲಜಾ ಬಸವರಾಜ್, ಮಾಜಿ ಸದಸ್ಯರಾದ ಟಿ.ಕೆ. ಬಸವರಾಜಪ್ಪ, ಗೋವಿಂದ ಹಾಲೇಕಲ್, ಕುಕ್ಕುವಾಡ, ಶಿರಮಗೊಂಡನಹಳ್ಳಿ ರುದ್ರೇಶ್ ಸೇರಿ ದಂತೆ ಇತರೆ ಗ್ರಾಮಗಳ ಮುಖಂಡರು ತಾಲ್ಲೂಕು ಕಚೇರಿಗೆ ಆಗಮಿಸಿದ್ದರು. 

ಈ ಸಂದರ್ಭದಲ್ಲಿ ತಹಶೀಲ್ದಾರ್ ಗಿರೀಶ್ ಅವರು ಅಧಿಕಾರಿಗಳ ಸಭೆ ನಡೆಸುತ್ತಿದ್ದರು. ಆಗ ಎಲ್ಲರೂ ಅರ್ಧ ಗಂಟೆಗೂ ಹೆಚ್ಚು ಸಮಯ ಕಾದಿದ್ದಾರೆ. ನಂತರ ಈ ವಿಚಾರ ತಹಶೀಲ್ದಾರ್ ಗಮ ನಕ್ಕೆ ತಂದಾಗ, ಜನಪ್ರತಿನಿಧಿಗಳ ಯಾವುದೇ ಸಭೆ ಕರೆದಿಲ್ಲ ಎಂದು ತಹಶೀಲ್ದಾರ್ ತಿಳಿಸಿದ್ದಾರೆ. ಈ ಮಾತುಗಳಿಂದ ಅಸಮಾಧಾನಗೊಂಡ ಜಿಲ್ಲಾ ಪಂಚಾಯ್ತಿ ಸದಸ್ಯೆ ಶೈಲಜಾ ಬಸವರಾಜ್ ಮತ್ತಿತರರು ತಹಶೀಲ್ದಾರ್ ಗಿರೀಶ್ ಅವರನ್ನು ತರಾಟೆಗೆ ತೆಗೆದುಕೊಂಡು, ಅವರ ನಡೆಯನ್ನು ಖಂಡಿಸಿದ್ದಾರೆ.

ಎಲ್ಲಾ ಜನಪ್ರತಿನಿಧಿಗಳು ಸಭೆಗೆ ಬರುವಂತೆ ಕರೆದಿದ್ದರು. ಸಮಯಕ್ಕೆ ಸರಿಯಾಗಿ ಬಂದರೂ ಸಹ ಸಭೆ ನಡೆಸದೇ ತಹಶೀಲ್ದಾರ್ ನಮ್ಮನ್ನೆಲ್ಲಾ ಕಾಯಿಸಿದ್ದಾ ರಲ್ಲದೇ, ಹಿರಿಯರೆಲ್ಲಾ ಬಂದರೂ ಸೌಜನ್ಯಕ್ಕೂ ಗಣನೆಗೆ ತೆಗೆದುಕೊಂಡಿಲ್ಲ. ಅಲ್ಲದೇ, ಸಭೆಯನ್ನೇ ಕರೆದಿಲ್ಲ ಎಂದು ಹೇಳುವ ಮೂಲಕ ತಹಶೀಲ್ದಾರ್ ಜನ ಪ್ರತಿನಿಧಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಶೈಲಜಾ ಬಸವರಾಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

error: Content is protected !!