ರಾಣೇಬೆನ್ನೂರು, ಜು.8- ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಬೇಳೆಕಾಳು, ಎಣ್ಣೆ ಮುಂತಾದವುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ನೇತೃತ್ವದಲ್ಲಿ ಸೈಕಲ್ ರಾಲಿ ಮೂಲಕ ಇಂದು ಪ್ರತಿಭಟನೆ ನಡೆಸಲಾಯಿತು.
ಕೆಇಬಿ ಗಣೇಶ ದೇವಸ್ಥಾನದಿಂದ ಹೊರಟ ರಾಲಿ ಬಸ್ ನಿಲ್ದಾಣ, ಫೋಸ್ಟ್ ಸರ್ಕಲ್, ಎಂ.ಜಿ. ರಸ್ತೆ, ದರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಹಳೆ ರಾಷ್ಟ್ರೀಯ ಹೆದ್ದಾರಿ ಮೂಲಕ ತಹಶೀಲ್ದಾರ್ ಕಛೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ವೀಕ್ಷಕ ವೆಂಕಟೇಶ್, ಮುಖಂಡರುಗಳಾದ ಮಂಜನಗೌಡ ಪಾಟೀಲ, ಶೇರು ಕಾಬೂಲಿ, ಏಕನಾಥ ಭಾನುವಳ್ಳಿ, ರವೀಂದ್ರಗೌಡ ಪಾಟೀಲ, ಪುಟ್ಟಪ್ಪ ಮರಿಯಮ್ಮನವರ, ನಿಂಗರಾಜ ಕೋಡಿಹಳ್ಳಿ, ಬಸನಗೌಡ ಮರದ, ಬಸವರಾಜ ಸವಣೂರ, ಬಸವರಾಜ ಹುಚ್ಚಗೊಂಡರ, ರಮೇಶ ಬಿಸಲಳ್ಳಿ, ಕಿರಣ್ ಮಾಂಡ್ರೆ, ಗುರು ಕಂಬಳಿ, ಕೃಷ್ಣಪ್ಪ ಕಂಬಳಿ, ಇರ್ಷಾದ್ ಬಳ್ಳಾರಿ ಇನ್ನಿತರರಿದ್ದರು.