ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಶ್ರೀಶೈಲ ಕ್ರೆಡಿಟ್ ಕೋ-ಆಪ್. ಸೊಸೈಟಿ

ದಾವಣಗೆರೆ,ಏ.18- ಜಿಲ್ಲೆಯ ಹೆಸರಾಂತ ಕ್ರೆಡಿಟ್ ಸೊಸೈಟಿಗಳಲ್ಲೊಂದಾದ ನಗರದ ಶ್ರೀ ಶ್ರೀಶೈಲ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮುನ್ನಡೆದಿದೆ.

ಈ ಸಂಬಂಧ ನಗರದ ಹದಡಿ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಸರಳ ಪೂಜಾ ಸಮಾರಂಭವನ್ನು ಇದೇ ದಿನಾಂಕ 12ರಂದು ನೆರವೇರಿಸುವುದರ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್.ವೆಂಕಟರೆಡ್ಡಿ ಅವರು, ಶ್ರೀಶೈಲ ಕ್ರೆಡಿಟ್ ಸೊಸೈಟಿಯು ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿರುವ  ಬಗ್ಗೆ ಸಂತಸ ವ್ಯಕ್ತಪಡಿಸಿದರು.

2021, ಮಾರ್ಚ್ ಅಂತ್ಯಕ್ಕೆ 13.10 ಕೋಟಿ ರೂ. ಠೇವಣಿ ಸಂಗ್ರಹಿಸಿರುವ ಈ ಸಂಘವು, ಸಂಘದ ಸದಸ್ಯರ ಅಗತ್ಯಕ್ಕನುಗುಣವಾಗಿ 12 ಕೋಟಿ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ. 1.8 ಕೋಟಿ ರೂ. ಷೇರು ಬಂಡವಾಳದೊಂದಿಗೆ ಮುನ್ನಡೆದಿದ್ದು, 25.15 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಂಕಿ – ಅಂಶಗಳೊಂದಿಗೆ ಸಂಘದ ಅಭಿವೃದ್ಧಿ ಕುರಿತಂತೆ ಅವರು ವಿವರಿಸಿದರು.

ಜಿಲ್ಲೆಯ ಪ್ರತಿಷ್ಠಿತ ಕೋ-ಆಪರೇಟಿವ್ ಸೊಸೈಟಿಗಳಲ್ಲೊಂದು ಎಂಬ ಹೆಗ್ಗಳಿಕೆಯೊಂದಿಗೆ `ಎ’ ಶ್ರೇಣಿಯಲ್ಲೇ ಮುನ್ನಡೆಯಲು ಕಾರಣಕರ್ತರಾಗಿರುವ ಪ್ರತಿಯೊಬ್ಬರನ್ನೂ ಸ್ಮರಿಸಿದ ವೆಂಕಟ ರೆಡ್ಡಿ ಅವರು, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಂಘದ ಉಪಾಧ್ಯಕ್ಷ ವಿ. ಪ್ರಕಾಶ್ ಮಾತನಾಡಿ, ಸಂಘವು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸದಸ್ಯರು – ಗ್ರಾಹಕರ ಸಹಕಾರ, ಠೇವಣಿದಾರರ ಪ್ರೋತ್ಸಾಹ, ಹಿತೈಷಿ ಗಳ ಮಾರ್ಗದರ್ಶನ, ಸಿಬ್ಬಂದಿ ವರ್ಗದವರ ಶ್ರಮ ಕಾರಣ ಎಂದು ಹೇಳುವುದರೊಂದಿಗೆ ಧನ್ಯವಾದ ಅರ್ಪಿಸಿದರು.

ನಿರ್ದೇಶಕರುಗಳಾದ ಟಿ.ಹೆಚ್. ರಾಜಶೇಖರ್, ಮೇಕಾ ಮುರುಳಿಕೃಷ್ಣ, ಕೆ.ಬಿ.ನಾಗರಾಜ್, ನಾಗೇಂದ್ರ ಎನ್. ಲದ್ವಾ, ಶ್ರೀಮತಿ ಎ.ಶ್ರೀದೇವಿ ತಿಮ್ಮಾರೆಡ್ಡಿ, ಕೆ. ನಾರಾಯಣ, ಬಿ. ವೆಂಕಟೇಶ್ವರ ರೆಡ್ಡಿ, ಬಿ. ಯೋಗಿ ರೆಡ್ಡಿ, ಬಿ.ವೆಂಕಟೇಶ್ವರ ರೆಡ್ಡಿ, ರಾಜಾ ನಾಯಕ್, ಶ್ರೀಮತಿ ಸರೋಜ ವೆಂಕಟೇಶ್ವರ ರೆಡ್ಡಿ ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಬಿ. ರಾಮನಾರಾಯಣ ರೆಡ್ಡಿ, ವ್ಯವಸ್ಥಾಪಕ ಕೆ. ರಾಘವೇಂದ್ರರಾವ್ ಅವರುಗಳು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಬೀಳ್ಕೊಟ್ಟರು.

error: Content is protected !!