ಜಗಳೂರು, ಜು.6- ದೇಶದ ಆಹಾರ ಭದ್ರತೆಗೆ ಹಸಿರು ಕ್ರಾಂತಿ ಮೂಲಕ ಹಸಿವು ನೀಗಿಸಿದ ಮಹಾನ್ ನಾಯಕ ಬಾಬು ಜಗಜೀವನ ರಾಂ ಅವರ ತತ್ವ, ಸಿದ್ಧಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಹೇಳಿದರು.
ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಮಾಜಿ ಉಪ ಪ್ರಧಾನ ಮಂತ್ರಿ ಡಾ. ಬಾಬು ಜಗಜೀವನರಾಮ್ ಅವರ 35 ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಬಾಬುಜೀ ಅವರು ಎಂದಿಗೂ ಅಧಿಕಾರದ ಆಸೆಗೆ ಬೀಳದೆ ಸದಾ ಜನಸಾಮಾನ್ಯರ ಅಭಿವೃದ್ಧಿ ಕನಸು ಕಂಡವರು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ತಿಮ್ಮರಾಜು, ದಲಿತ ಮುಖಂಡ ಭಾರತ್ ಗ್ಯಾಸ್ ಓಬಣ್ಣ, ಡಿ.ಎಸ್.ಎಸ್.ಸಂಚಾಲಕ ಸತೀಶ್, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳಾದ ಉಮೇಶ್, ಮಲ್ಲಿಕಾರ್ಜುನ್, ಅಲ್ಲಾಭಕ್ಷಿ, ಗಿರೀಶ್, ಮಲ್ಲಪ್ಪ, ಯಲ್ಲಪ್ಪ, ಮಂಜುನಾಥ್, ಕರಿಬಸಪ್ಪ ಇನ್ನಿತರರಿದ್ದರು.