ಮಲೇಬೆನ್ನೂರು, ಜು.6- ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿಯಾಗಿ ಎನ್.ಕೆ. ಡೊಂಬರ್ ಅವರು ಇಂದು ಮಧ್ಯಾಹ್ನ ಪ್ರಭಾರ ಮುಖ್ಯಾಧಿಕಾರಿ ದಿನಕರ್ ಅವರಿಂದ ಅಧಿಕಾರ ವಹಿಸಿಕೊಂಡರು. ಡೊಂಬರ್ ಅವರು ಈವರೆಗೂ ಮುಂಡರಗಿ ಪುರಸಭೆ ಮುಖ್ಯಾಧಿಕಾರಿಯಾಗಿದ್ದರು.
ಅಧಿಕಾರ ವಹಿಸಿಕೊಂಡ ನಂತರ ಅಧಿಕಾರಿಗಳ, ಸಿಬ್ಬಂದಿಗಳ, ಪೌರ ಕಾರ್ಮಿಕರ ಸಭೆ ನಡೆಸಿದ ಡೊಂಬರ್ ಅವರು, ಪಟ್ಟಣದಲ್ಲಿ ಸ್ವಚ್ಛತೆ ಹಾಗೂ ಕೋವಿಡ್ ನಿಯಂತ್ರಣ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಶ್ರಮ ವಹಿಸೋಣ ಎಂದು ಕರೆ ನೀಡಿದರು.
ಪುರಸಭೆ ಅಧಿಕಾರಿಗಳಾದ ದಿನಕರ್, ಪ್ರಭು, ಉಮೇಶ್, ಗುರುಪ್ರಸಾದ್, ನವೀನ್, ಶಿವಯೋಗಿ ಕುಳೇನೂರು, ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ್, ಇಮ್ರಾನ್ ಮತ್ತು ಪುರಸಭೆ ಮಾಜಿ ಸದಸ್ಯರಾದ ಎ. ಆರೀಫ್ ಅಲಿ, ದಾದಾವಲಿ, ಭೋವಿಕುಮಾರ್ ಈ ವೇಳೆ ಹಾಜರಿದ್ದರು.