ಮಲೇಬೆನ್ನೂರು, ಜು.6- ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿಯಿತು. ಚರಂಡಿಯಲ್ಲಿ ಕಸ ತುಂಬಿದ್ದರಿಂದ ನೀರು ರಸ್ತೆ ತುಂಬೆಲ್ಲಾ ಹರಿಯಿತು.
ಆದರೆ ವಿಪರ್ಯಾಸ ಎಂದರೆ ಮಲೇಬೆನ್ನೂರು ಪಕ್ಕದ ಕುಂಬಳೂರು, ಜಿಗಳಿ, ಜಿ.ಬೇವಿನಹಳ್ಳಿ ಮತ್ತಿತರೆ ಗ್ರಾಮಗಳಿಗೆ ಈ ಮಳೆ ಬರಲಿಲ್ಲ.
ಮಳೆ ನೀರು ಆಶ್ರಿತ ಮೆಕ್ಕೆಜೋಳ ಬೆಳೆಗಳು ಮಳೆ ಇಲ್ಲದೆ ಬತ್ತುತ್ತಿದ್ದು, ಜಿ.ಟಿ. ಕಟ್ಟೆ, ಮೂಗಿನಗೊಂದಿ, ಬೆಳ್ಳೂಡಿ, ಎಕ್ಕೆಗೊಂದಿ, ಭಾನುವಳ್ಳಿ, ಹೊಸಳ್ಳಿ ಮತ್ತಿತರೆ ಗ್ರಾಮಗಳಲ್ಲಿ ರೈತರು ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗುಡ್ಡದಲ್ಲೂ ಸ್ವಲ್ಪ ಮಳೆಯಾಗಿದ್ದರಿಂದ ಮೆಕ್ಕೆಜೋಳ, ತೋಟಗಳಿಗೆ ಸ್ವಲ್ಪ ಅನುಕೂಲವಾಯಿತು.