ದಾವಣಗೆರೆ, ಜು.6- ನಗರದ ಆರ್.ಜಿ. ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್‌ನ ಪದವಿ ಪೂರ್ವ, ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಚಿತವಾಗಿ ಕೊರೊನಾ ಲಸಿಕೆ ಪಡೆದುಕೊಂಡರು.
ಡಾ. ದೇವರಾಜ್ ಪಿ. ಪಟಗಿ ಅವರ ಮಾರ್ಗದರ್ಶನದಂತೆ ಶ್ಯಾಗಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಎಸ್. ನೇತಾಜಿ ಮತ್ತು ಅವರ ತಂಡದವರು ಲಸಿಕೆ ನೀಡಿದರು.
ಈ ಸಂದರ್ಭದಲ್ಲಿ ಆರ್.ಜಿ. ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ವೇತಾ ಆರ್. ಗಾಂಧಿ, ಪ್ರಾಂಶುಪಾಲರಾದ ಸಿ. ಸುನೀಲ್ ಕುಮಾರ್, ಉಪ ಪ್ರಾಂಶುಪಾಲ ಎಂ.ಎಸ್. ವಿಜಯ್ ಮತ್ತಿತರರು ಹಾಜರಿದ್ದರು.