ಅಂಬೇಡ್ಕರ್ ದಮನಿತ ವರ್ಗಗಳ ನಾಯಕ

ಹರಪನಹಳ್ಳಿಯಲ್ಲಿ ಶಾಸಕ ಜಿ. ಕರುಣಾಕರ ರೆಡ್ಡಿ

ಹರಪನಹಳ್ಳಿ, ಏ.15- ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಕೇವಲ ಒಂದು ಜನಾಂಗದ, ಸಮುದಾಯದ ನಾಯಕರಲ್ಲ. ಅವರೊಬ್ಬ ದಮನಿತ ವರ್ಗಗಳ, ಶೋಷಿತರ ಹಾಗೂ ಸ್ತ್ರೀಕುಲದ ಪಾಲಿಗೆ ಆದರ್ಶ ಚೇತನರಾಗಿದ್ದರು ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.

ಪಟ್ಟಣದ ಬಿಜೆಪಿ ಕಛೇರಿಯಲ್ಲಿ ತಾಲ್ಲೂಕು ಎಸ್ಸಿ ಮೋರ್ಚಾ ಹಾಗೂ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 130 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಇಂದು ವಿಶ್ವದೆಲ್ಲೆಡೆ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡು  ಬರಲಾಗುತ್ತಿದೆ. ಬಾಬಾ ಸಾಹೇಬ್ ಅವರು ಸ್ವಾವಲಂಬಿ ಜೀವನ ಮತ್ತು ಶಿಕ್ಷಣ ಪಡೆದವನು ಸಾಮಾಜಿಕ ಕರ್ತವ್ಯವನ್ನು ಅರಿತು, ಸಂಘಟಿತರಾಗಿ ಪ್ರಬುದ್ಧತೆಯನ್ನು ಪಡೆದು, ತನ್ನ ಹಕ್ಕನ್ನು ಕೇಳಿ ಪಡೆಯುವವನಾಗಬೇಕು ಎಂಬ ಸಂದೇಶವನ್ನು ನೀಡಿದ್ದರು. ಅದರಂತೆ ನಾವೆಲ್ಲರೂ ನಡೆದುಕೊಳ್ಳಬೇಕು ಎಂದರು. 

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷರುಗಳಾದ ನಿಟ್ಟೂರು ಸಣ್ಣಹಾಲಪ್ಪ,  ಮಂಜ್ಯಾನಾಯ್ಕ, ಎಸ್.ಟಿ. ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಆರ್. ಲೋಕೇಶ್, ಎಸ್ಸಿ ಮೋರ್ಚಾ ಅಧ್ಯಕ್ಷ ಎಂ. ಮಲ್ಲೇಶ್, ಉಪಾಧ್ಯಕ್ಷ ಚಂದ್ರಪ್ಪ, ಮುಖಂಡರಾದ ಎಂ.ಪಿ. ನಾಯ್ಕ್, ಬಾಗಳಿ ಕೊಟ್ರಬಸಪ್ಪ, ಎಸ್.ಪಿ. ಲಿಂಬ್ಯಾನಾಯ್ಕ, ಶಿರಗನಹಳ್ಳಿ ವಿಶ್ವನಾಥ್, ಸಂತೋಷ್, ರಂಗಾಪುರ ಬಸವರಾಜ್, ಉದಯ್,  ವಕೀಲ ರಾದ ಕೆ. ಪ್ರಕಾಶ್, ಜಾತಪ್ಪ, ಮಾಬೂಸಾಬ್, ರಾಘವೇಂದ್ರ ಶೆಟ್ಟಿ, ಪರಮೇಶ್ವರಪ್ಪ, ಚಿರಸ್ತಹಳ್ಳಿ ಬಸವರಾಜ್ ಇನ್ನಿತರರಿದ್ದರು. 

error: Content is protected !!