ದಾವಣಗೆರೆ, ಏ.15- ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಜಿಲ್ಲೆಯ ವಿವಿಧ ಕಡೆ ಸಂಭ್ರಮದಿಂದ ಆಚರಿಸಲಾಯಿತು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ: ನಗರದ ಹದಡಿ ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ ಹಾಗೂ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ವಿಭಾಗ ಜಂಟಿಯಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಹೆಚ್. ಸುಭಾನ್ ಸಾಬ್, ರಾಷ್ಟ್ರೀಯ ಮಜ್ದೂರ್ ವಿಭಾಗದ ಅಧ್ಯಕ್ಷ ಕೆ.ಎಂ. ಮಂಜುನಾಥ್, ಮುಖಂಡ ಅಲ್ಲಾವಲಿ ಮುಜಾಹಿದ್, ಅಶ್ರಫ್ ಅಲಿ, ಶಶಿ ಅಂಗಡಿ, ಜೆ.ವಿ. ವೆಂಕಟೇಶ್, ಗೋಪಿ, ವಾಜಿದ್ ಖಾನ್, ರಫೀಕ್, ಪ್ರವೀಣ್, ರವಿಕುಮಾರ್, ಖಾನ್ಸಾಬ್, ಹಜ್ರತ್ ಅಲಿ, ನಾಗರಾಜ್, ಮುಪ್ಪಳ್ಳಿ ಹನುಮಂತ, ನಿಂಗಪ್ಪ, ಕೊಟ್ರೇಶ್, ಹೆಚ್.ವಿ. ರಂಗನಾಥ್, ಪ್ರಕಾಶ್, ಹಸನ್ ಅಲಿ, ಲಿಬರ್ಟಿ ಖಾನ್ ಸಾಬ್ ಸೇರಿದಂತೆ ಇತರರು ಇದ್ದರು.
ಶ್ಯಾಗಲೆಯಲ್ಲಿ ಜಯಂತಿ ಸಂಭ್ರಮ: ತಾಲ್ಲೂಕಿನ ಶ್ಯಾಗಲೆ ಗ್ರಾಮದಲ್ಲಿ ಕರ್ನಾಟಕ ಸಂಘರ್ಷ ಸಮಿತಿಯಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಮಾಯಕೊಂಡ ಎಸ್.ಸಿ. ಮೋರ್ಚಾ ಅಧ್ಯಕ್ಷ ಹನು ಮಂತಪ್ಪ ಲೋಕಿಕೆರೆ, ಜಗದೀಶ್, ಸಂಗಪ್ಪ, ಧನ್ಯಕುಮರ್, ಮಂಜಪ್ಪ, ಏಳುಕೋಟಿ, ಅಣ್ಣಪ್ಪ, ಸಂದೀಪ, ಮಹಾಂತೇಶ್ ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಅಂಬೇಡ್ಕರ್ ಯುವಕರ ಸಂಘ, ಗ್ರಾಮಸ್ಥರು ಇದ್ದರು.