ಪ್ರೊ. ಬಿ. ಕೃಷ್ಣಪ್ಪ ಹುಟ್ಟಿ ಬೆಳೆದ ಹರಿಹರದ ಮನೆಯನ್ನು ಸ್ಮಾರಕ ಮಾಡಬೇಕು

ಹರಿಹರದಲ್ಲಿರುವ ಕೃಷ್ಣಪ್ಪನವರ ನಿವಾಸಕ್ಕೆ ನಿವೃತ್ತ ನ್ಯಾಯಾಧೀಶ ಕಾಳಪ್ಪ ಗೋಕಳೆ ಭೇಟಿ

ಹರಿಹರ, ಫೆ.14- ದೂರ ದೃಷ್ಟಿಯ ಕಲ್ಪನೆ, ಸಮಾಜಮುಖಿ ಆಲೋಚನೆ ಮೈಗೂಡಿಸಿಕೊಂಡಿದ್ದ ಪ್ರೊ. ಬಿ. ಕೃಷ್ಣಪ್ಪ ಅವರು ಶೋಷಿತರ ಶ್ರೇಯಸ್ಸಿಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಘಟನೆಯನ್ನು ಹುಟ್ಟು ಹಾಕಿದ ಸಮಾಜ ಚಿಂತಕರು ಎಂದು ನಿವೃತ್ತ ನ್ಯಾಯಾಧೀಶರಾದ ಕಾಳಪ್ಪ ಗೋಕಳೆ ಹೇಳಿದರು.

ನಗರದ ಪರಿಶಿಷ್ಟರ ಕಾಲೊನಿಯಲ್ಲಿರುವ ಪ್ರೊ. ಬಿ. ಕೃಷ್ಣಪ್ಪನವರ ಮನೆಗೆ  ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಜಾತಿ ವಿನಾಶ, ಅಸ್ಪೃಶ್ಯತೆ ವಿನಾಶ, ಸರ್ವರಿಗೂ ಶಿಕ್ಷಣ, ಮೌಢ್ಯ, ಕಂದಾಚಾರ ವಿನಾಶ, ಭೂ ರಹಿತರಿಗೆ ಭೂಮಿ ಹಂಚಿಕೆ ಹೀಗೆ ಹತ್ತು ಹಲವು ವಿಷಯಗಳನ್ನು ಆಧರಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿ ರಾಜ್ಯದ ಉದ್ದಗಲಕ್ಕೂ ಹೋರಾಟ ಧರಣಿಗಳನ್ನು ಮಾಡುತ್ತಾ ತುಳಿತಕ್ಕೊಳಗಾದ ಜನಾಂಗಕ್ಕೆ ನ್ಯಾಯ ದೊರಕಿಸಿಕೊಟ್ಟ ಮಹಾನ್ ಚೇತನ ಕೃಷ್ಣಪ್ಪನವರು ಎಂದರು.

ಹೋರಾಟದ ಜತೆ ಜತೆಗೆ ಕನ್ನಡ ಪ್ರಾಧ್ಯಾಪಕ ರಾಗಿಯೂ ವಿದ್ಯಾರ್ಥಿಗಳಲ್ಲಿ ಚಳವಳಿಯ ಕಿಚ್ಚು ಹಚ್ಚಿದರು. ಇದಕ್ಕಾಗಿ ಕರ್ನಾಟಕ ದಲಿತ ವಿದ್ಯಾ ರ್ಥಿಗಳ ಒಕ್ಕೂಟವನ್ನು ಕೃಷ್ಣಪ್ಪನವರು ಸ್ಥಾಪಿಸಿ ದರು. ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿ ಸುವುದಕ್ಕಾಗಿಯೇ ಪ್ರಾಧ್ಯಾಪಕ ವೃತ್ತಿಗೆ ರಾಜೀ ನಾಮೆ ನೀಡಿದರು. ಮೂರು ದಶಕಗಳ ಕಾಲ ಹೋರಾಟವನ್ನು ಉಸಿರಾಗಿಸಿಕೊಂಡಿದ್ದ ಪ್ರೊಫೆ ಸರ್ ಕೃಷ್ಣಪ್ಪನವರು, ಹರಿಹರದ ಪರಿಶಿಷ್ಟರ ಕಾಲೋನಿಯಲ್ಲಿ ಹುಟ್ಟಿ ಬೆಳೆದು ನಾಡಿನಲ್ಲೇ ದಲಿತ ಪ್ರಜ್ಞೆ ಹುಟ್ಟು ಹಾಕಿದ ಮಹಾನ್ ಚೇತನ ಪ್ರೊ. ಬಿ.ಕೃಷ್ಣಪ್ಪನವರ ಆದರ್ಶ ಮೌಲ್ಯಗಳನ್ನು ಮೈಗೂಡಿ ಸಿಕೊಂಡು ಈಗಿನ ಯುವಕರು ನಡೆದು ಕೊಂಡು ಹೋಗಿ, ಒಗ್ಗಟ್ಟಾಗಿ ಹೋರಾಟಗಳನ್ನು ಮಾಡಿ ಅನ್ಯಾಯ, ತುಳಿತಕ್ಕೊಳಗಾದವರಿಗೆ ನ್ಯಾಯ ದೊರಕಿಸಿ ಕೊಡುವಂತೆ ಸತ್ಕಾರ್ಯಗಳನ್ನು ಮಾಡಬೇಕು.

ಕುವೆಂಪುರವರು ಹುಟ್ಟಿ ಬೆಳೆದ ಕುಪ್ಪಳ್ಳಿಯಲ್ಲಿನ ಮನೆಯನ್ನು ಸ್ಮಾರಕ ಮಾಡಿರುವ ರೀತಿ, ಹರಿಹರ ನಗರದ ಎಕೆ ಕಾಲೋನಿಯಲ್ಲಿರುವ ಪ್ರೊ. ಕೃಷ್ಣಪ್ಪನವರು ಹುಟ್ಟಿ ಬೆಳೆದ ಮನೆಯನ್ನು ಸ್ಮಾರಕ ಮಾಡಿದರೆ, ಹೋರಾಟಗಾರರಿಗೆ ಪ್ರೇರಣೆಯಾಗುತ್ತದೆ ಎಂದು ಅವರ ಕುಟುಂಬದ ಸಹೋದರ ಮಾಜಿ ದೂಡ ಸದಸ್ಯ ಎಚ್. ನಿಜಗುಣ ಹೇಳಿದರು.  

ಈ ಸಂದರ್ಭದಲ್ಲಿ ನಿರಂಜನ್, ವಾಸುದೇವ್, ಹನಮಂತಪ್ಪ, ಎಚ್. ಮಲ್ಲೇಶ್, ಡಿ. ಹನುಮಂತಪ್ಪ, ಕೇಶವ ಕಂಚಿಕೇರಿ, ಆನಂದ್, ಬಸವರಾಜ್, ಎಂ.ಎಸ್ ಶ್ರೀನಿವಾಸ್, ಶಂಕರ್ ಮೂರ್ತಿ, ಸುರೇಂದ್ರ, ನಿರಂಜನಮೂರ್ತಿ, ವೈ.ಬಿ. ಪ್ರಭಾಕರ್,
ಪಿ. ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!