ರಾಣೇಬೆನ್ನೂರು, ಜು.5– ಜು. 5ರೊಳಗೆ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಜನ ಮತ್ತು ಜಾನುವಾರು ಗಳೊಂದಿಗೆ ಅಪ್ಪರ್ ತುಂಗಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ರೈತರು ಜು.2 ರಂದು ಮನವಿ ಸಲ್ಲಿ ಸಿದ್ದು, ಮನವಿಗೆ ಸ್ಪಂದಿಸಿರುವ ಅಧಿ ಕಾರಿಗಳು ಇಂದು ಕಾಲುವೆಗೆ ನೀರು ಹರಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂ ದ್ರಗೌಡ ಎಫ್. ಪಾಟೀಲ್ ತಿಳಿಸಿದ್ದಾರೆ.
ನಿಯಮಗಳ ಪ್ರಕಾರ ವಾಡಿಕೆಯಂತೆ ಜುಲೈ 15ಕ್ಕೆ ಕಾಲುವೆಗೆ ನೀರು ಹರಿಸುತ್ತಾರೆ. ಡ್ಯಾಂ ತುಂಬಿದ್ದು, ಇಂತಹ ಭೀಕರ ಪರಿಸ್ಥಿತಿಯಲ್ಲಿ ಯೋಜನೆಯ ನಿಯಮಾವಳಿ ಗಳಿಗೆ ಜೋತು ಬೀಳದೆ, ಪರಿಸ್ಥಿತಿ ಅವಲೋಕಿಸಿ, ನೀರು ಹರಿಸುವ ಮೂಲಕ ರೈತರು ಮತ್ತು ಜಾನುವಾರು ಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂಬ ಮನವಿಯನ್ನು ಫ್ಯಾಕ್ಸ್ ಮೂಲಕ ಶಿವಮೊಗ್ಗದ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಅಭಿಯಂತರರಿಗೆ ಸಲ್ಲಿಸಲಾಗಿತ್ತು.
ಮನವಿಗೆ ಸ್ಪಂದಿಸಿರುವ ಅಧಿಕಾರಿಗಳು ಇಂದು ಬೆಳಿಗ್ಗೆ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಗೆ ನೀರು ಹರಿಸಿದ್ದು, ಕಾರ್ಯ ನಿರ್ವಾಹಕ ಇಂಜಿನಿಯರ್ ಡಿ. ಸುರೇಶ್ ಇವರು ಪತ್ರಿಕೆಗೆ ಪ್ರಕಟಣೆ ನೀಡಿರುವುದು ಸಂತಸ ತಂದಿದೆ ಎಂದರು.