ಜಿಗಳಿಯ ಮಿತ್ರ ಕ್ರಿಕೆಟರ್‌ಗೆ ದ್ವಿತೀಯ ಬಹುಮಾನ
ಮಲೇಬೆನ್ನೂರು, ಫೆ.11- ವಿನಾಯಕ ನಗರ (ಜಿಗಳಿ ಕ್ಯಾಂಪ್) ಕ್ಯಾಂಪ್ ಸಮೀಪ ಇರುವ ಬಯಲು ಪ್ರದೇಶದಲ್ಲಿ ಜಿಗಳಿಯ ಮಿತ್ರ ಕ್ರಿಕೆಟರ್ ವತಿಯಿಂದ 3ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಗ್ರಾಮಾಂತರ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಗುರುವಾರ ರಾತ್ರಿ ನಡೆಯಿತು.
ಪ್ರಥಮ ಬಹುಮಾನ ಪಡೆದ ಮಲೇಬೆನ್ನೂರಿನ ಆರ್‌ಸಿಬಿ ತಂಡಕ್ಕೆ 22 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಅವರು ನೀಡಿ, ಅಭಿನಂದಿಸಿದರು.
ದ್ವಿತೀಯ ಬಹುಮಾನ ಪಡೆದ ಜಿಗಳಿಯ ಮಿತ್ರ ಕ್ರಿಕೆಟರ್ ತಂಡಕ್ಕೆ 11 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ ಅವರು ನೀಡಿ, ಅಭಿನಂದಿಸಿದರು.
ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಬಿಜೆಪಿ ಮುಖಂಡ ಬಿಳಸನೂರು ಚಂದ್ರಪ್ಪ, `ಜನತಾವಾಣಿ’ ವರದಿಗಾರ ಜಿಗಳಿ ಪ್ರಕಾಶ್, ಜಿಗಳಿ ಗ್ರಾ.ಪಂ. ಸದಸ್ಯರಾದ ಕೆ.ಜಿ.ಬಸವರಾಜ್, ವೈ.ಆರ್.ಚೇತನ್‌ಕುಮಾರ್, ಉಪನ್ಯಾಸಕ ಕೆ.ಎನ್.ಮಂಜುನಾಥ್, ಶಾಮಿಯಾನ ಮಾಲೀಕ ಬೆಣ್ಣೆಹಳ್ಳಿ ಸತೀಶ್, ದೊಡ್ಡಘಟ್ಟದ
ಮಂಜಣ್ಣ, ಮಿತ್ರ ಕ್ರಿಕೆಟರ್ನ ಕೆ.ಡಿ.ಬಸವರಾಜ್ (ತಮ್ಮಿ), ಭಾನುವಳ್ಳಿ ಶಿವು, ಬೇವಿನಹಳ್ಳಿ ಗದಿಗೇಶ್, ಕೀರ್ತಿ (ಪಾರ್ಥ), ಜಿ.ಎಸ್.ವಿಜಯಕುಮಾರ್, ಪಿ.ಬಿ.ಶರತ್
ಮತ್ತಿತರರು ಬಹುಮಾನ ವಿತರಣೆಯಲ್ಲಿ ಭಾಗವಹಿಸಿದ್ದರು.