ಪ್ರೊ. ಕೆ.ಆರ್ ಸಿದ್ದಪ್ಪ
ದಾವಣಗೆರೆ, ಏ.14 – ನಮ್ಮ ದೈನಂದಿನ ಜೀವನದಲ್ಲಿ ಅನೇಕ ಸಂಗತಿಗಳನ್ನು ನೋಡುತ್ತೇವೆ, ಕೇಳುತ್ತೇವೆ. ಅವುಗಳ ಬಗ್ಗೆ ಸಂಪೂರ್ಣವಾಗಿ ಗಂಭೀರವಾಗಿ ಗಮನ ಹರಿಸಿ ಆಲೋಚಿಸುವಂತಾದರೆ ಹೊಸತನ್ನು ಕಂಡುಕೊಳ್ಳಲು ಸಾಧ್ಯವೆಂದು ಶ್ರೀ ಅರವಿಂದ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಕೆ.ಆರ್.ಸಿದ್ದಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಇಲ್ಲಿನ ಶ್ರೀಮತಿ ಚನ್ನಪ್ಳ ಶಿವಲಿಂಗಮ್ಮ ಗುರುಬಸಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ಉಡುಗೆ-ತೊಡುಗೆ ಉತ್ಸವದಲ್ಲಿ ಬದ ಲಾವಣೆಯ ಬೆಳಕು ಶೀರ್ಷಿಕೆಯಡಿಯಲ್ಲಿ ದೀಪ ಬೆಳಗಿ ಸುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡುತ್ತಾ ಭಾರತ ವೈವಿಧ್ಯಮಯ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ದೇಶ ಪ್ರಾಚೀನ ಸಂಪ್ರದಾಯ, ಮೌಲ್ಯಗಳು ಜಗತ್ತಿನಲ್ಲಿಯೇ ಶ್ರೇಷ್ಠತೆಯನ್ನು ಗಳಿಸಿವೆ. ಇಂದಿನ ಜನಾಂಗ ಇವುಗಳ ಮಹತ್ವ, ಸೈದ್ಧಾಂತಿಕ, ವೈಜ್ಞಾನಿಕ ವಿಚಾರಗಳ ಸಮ್ಮೇಳ ಮಾಡಿಕೊಂಡಾಗ ಜೀವನದಲ್ಲಿ ನವಚೈತನ್ಯ, ಸ್ಪೂರ್ತಿ, ಉತ್ಸಾಹ ಉಂಟಾ ಗುತ್ತದೆ. ಸತ್ಯಾಸತ್ಯತೆಯ ವಿವೇಚನೆ ಬೆಳೆಯುತ್ತದೆ. ನಮ್ಮ ದೇಶದಲ್ಲಿ ಮಾತ್ರ ಮಾನವ ಜನಾಂಗದ ವೈವಿಧ್ಯ ಮಯ ಕುಲ ಸಂಪ್ರದಾಯ ಗಳನ್ನು ಕಾಣಬಹುದು.
ಈ ಕಾರಣಗಳಿಂದಲೇ ಭಾರತವನ್ನು ಜಗತ್ತಿನ ಮಾನವ ಕುಲ ಸಂಪ್ರದಾಯ ಗಳ ಮ್ಯೂಸಿಯಂ ಎಂದು ಕರೆಯಲಾಗುತ್ತಿದೆ. ಇಂದಿನ ವಿದ್ಯಾರ್ಥಿಗಳು ಈ ಬಗ್ಗೆ ಗಂಭೀರವಾಗಿ ಗಮನಿಸಿ ವೈಜ್ಞಾನಿಕವಾಗಿ ಆಲೋಚಿಸುವುದು ಶ್ಲಾಘನೀಯ ಎಂದು ತಿಳಿಸಿದರು.
ಪ್ರಾಚಾರ್ಯ ಎಸ್. ಚಂದ್ರಪ್ಪ ಮಾತನಾಡಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಸಾಂಪ್ರದಾಯಿಕ ಉಡುಗೆ – ತೊಡುಗೆಗಳಿಂದ ಆತ್ಮ ವಿಶ್ವಾಸ, ನಿರ್ಭೀತಿ ಯನ್ನು ತೋರಿಸಿರುವುದು ಅಭಿನಂದನೀಯ ಎಂದರು.
ಇಂಗ್ಲಿಷ್ ಉಪನ್ಯಾಸಕ ಸುಭಾಷ್ ರಾ.ಶಿಂಧೆ ಕಾರ್ಯಕ್ರಮದ ಮಹತ್ವವನ್ನು ಹೇಳಿದರು.
ಇತಿಹಾಸ ಉಪನ್ಯಾಸಕ ಗುಡ್ಡಪ್ಪ ಆರ್.ಓಲೇಕಾರ ಸಂಪ್ರದಾಯ, ಬಟ್ಟೆಗಳು ಮತ್ತು ಆಭರಣಗಳ ಬಗ್ಗೆ ಮಾಹಿತಿ ನೀಡಿದರು, ಕನ್ನಡ ಉಪನ್ಯಾಸಕ ಹಾಗೂ ಕಾಮರ್ಸ್ ಉಪನ್ಯಾಸಕಿ ನಾಗವೇಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲಾ ವಿದ್ಯಾರ್ಥಿಗಳು ಸಂಪ್ರದಾಯಿಕ ಬಟ್ಟೆ ತೊಟ್ಟು ಉತ್ಸಾಹ ತೋರಿದರು.
ವಿದ್ಯಾರ್ಥಿನಿ ರೂಪಾ ಸ್ವಾಗತಿಸಿದರು. ರಮ್ಯ ವಂದಿಸಿದರು.