ಶೇಂಗಾ ಬೆಳೆಗಾರರಿಗೆ ಆನ್‌ಲೈನ್‌ ತರಬೇತಿ

ಜಗಳೂರು, ಜು.4- ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ ಹಾಗೂ ಕೃಷಿ ಇಲಾಖೆ ಜಗಳೂರು ಇವರ ಸಹಯೋಗದೊಂದಿಗೆ ತಾಲ್ಲೂಕಿನ ಶೇಂಗಾ ಬೆಳೆಗಾರರಿಗೆ ಅಂತರ್ಜಾಲದ ಮುಖಾಂತರ  ತರಬೇತಿ ನೀಡಲಾಯಿತು.

ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್  ಮಾತನಾಡಿ,  ರೈತರು ಶೇಂಗಾದಲ್ಲಿ ನವೀನ ತಳಿಗಳಾದ G -2-52, GPBD-4, ICGV -9114ಮತ್ತು Kadri ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು ಹಾಗೂ ಪ್ರತಿ ಎಕರೆಗೆ 200 ಕೆಜಿ ಜಿಪ್ಸಂ ಬಳಸಬೇಕು ಎಂದರು. 

ಕತ್ತು ಕೊಳೆ ರೋಗ ಹಾಗೂ ಬುಡಕೊಳೆ ರೋಗವನ್ನು ತಡೆಯಲು ಪ್ರತಿ ಕೆ.ಜಿ. ಶೇಂಗಾ ಬೀಜಕ್ಕೆ  ಟ್ರೈಕೋಡರ್ಮಾದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಮುಂದೆ ಬರುವ ರೋಗಗಳನ್ನು ತಡೆಯಬಹುದು ಎಂದು ಮಾಹಿತಿ ನೀಡಿದರು. ತರಬೇತಿ ಕಾರ್ಯಕ್ರಮದಲ್ಲಿ ರೈತರು ಸಕ್ರಿಯವಾಗಿ ಭಾಗವಹಿಸಿ ಹಲವಾರು ಪ್ರಶ್ನೆಗಳನ್ನು ವಿಜ್ಞಾನಿಗಳೊಂದಿಗೆ ಹಂಚಿಕೊಂಡರು. ಹಾಗೂ ಸೂಕ್ತ ಉತ್ತರವನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸಲು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ  ಡಾ. ಟಿ.ಎನ್. ದೇವರಾಜ್ ಹಾಗೂ ವಿಸ್ತರಣಾ ತಜ್ಞರು ಭಾಗವಹಿಸಿದ್ದರು.

error: Content is protected !!