ಹರಿಹರ, ಜು.3- ನಗರದಲ್ಲಿ ನಡೆಯುತ್ತಿರುವ ಜಲಸಿರಿ ಯೋಜನೆಯ ಕಾಮಗಾರಿ ಪರಿಶೀಲನೆಯನ್ನು ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮಿ, ಜಲಸಿರಿ ಯೋಜನೆ ಅಧಿಕಾರಿಗಳಾದ ರವಿ, ಜಗದೀಶ್, ದೇವರಾಜ್ ಹಾಗು ಇನ್ನಿತರೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಒಂಬತ್ತನೇ ವಾರ್ಡ್ನ ಜೆಡಿಸ್ ಪಕ್ಷದ ಮುಖಂಡ ಸುರೇಶ್ ಚಂದಾಪುರ್ ಮಾತನಾಡಿ, ನಗರದ ಟಿ.ಬಿ. ರಸ್ತೆಯು ಯುಜಿಡಿ ಕಳಪೆ ಕಾಮಗಾರಿಯಿಂದ ಹಾಳಾಗಿ ಹೋಗಿದ್ದು , ಪ್ರಸಿದ್ಧ ಐತಿಹಾಸಿಕ ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೊಂದರೆ ಆಗುತ್ತಿದೆ. ಆದಷ್ಟು ಬೇಗನೆ ರಸ್ತೆ ದುರಸ್ತಿ ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಿಬ್ಬಂದಿ ರಮೇಶ್, ವೇದಮೂರ್ತಿ ಇನ್ನಿತರರಿದ್ದರು.