ಸೈನಿಕರಿಗೆ ಸೈನ್ಯವೇ ಪರಿವಾರ, ಕುಟುಂಬವೇ ಅತಿಥಿಗಳು

ಕೂಡ್ಲಿಗಿಯಲ್ಲಿ ಯೋಧರಿಗೆ ಸನ್ಮಾನ

ಕೂಡ್ಲಿಗಿ, ಫೆ.8- ಗಜಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ಯುವಕರು ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಎನ್.ಎಸ್.ಜಿ. ತುಕಡಿಯ ಬ್ಲಾಕ್‌ ಕ್ಯಾಟ್ ಕಮ್ಯಾಂಡೋಗೆ ಆಯ್ಕೆಯಾದ ಕೂಡ್ಲಿಗಿಯ ಅಮಿನುದ್ದೀನ್ ಬಾಷಾ ಸನ್ಮಾನ ಸ್ವೀಕರಿಸಿ ಮಾತನಾಡಿ, ಯೋಧರ ಬದುಕೇ ವಿಚಿತ್ರವಾಗಿದ್ದು, ಒಬ್ಬೊಬ್ಬರದು ಒಂದೊಂದು ಕಥೆ, ವ್ಯಥೆಯಾಗಿರು ತ್ತದೆ. ಜೀವ ಪಣಕ್ಕಿಟ್ಟು ದೇಶ ಕಾಯುವ ಕಾಯಕ ಒಂದೆಡೆಯಾದರೆ, ಕುಟುಂಬದ ಜೀವನ ಕುರಿತು ಆತಂಕವಿರುತ್ತದೆ. ಆದರೂ ರಕ್ಷಣಾ ಕಾರ್ಯ ಮಾತ್ರ ನಿರಂತರವಾಗಿರುತ್ತದೆ. ಸೈನಿಕರಿಗೆ ಸೈನ್ಯವೇ ಪರಿವಾರ, ಕುಟುಂಬವೇ ಅತಿಥಿಗಳು ಎಂದರು.

ಕೂಡ್ಲಿಗಿ ನಿವೃತ್ತ ಯೋಧ ಹೆಚ್. ರಮೇಶ್ ಮಾತನಾಡಿ, ತಾವು 23 ವರ್ಷಗಳ ಕಾಲ ದೇಶ ರಕ್ಷಣೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ ಹೆಮ್ಮೆ ಇದೆ ಎಂದರು. ಲೇಖಕ ಭೀಮಣ್ಣ ಗಜಾಪುರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಹೆಚ್. ಅಂಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಸದಸ್ಯ ಸೈಯ್ಯದ್ ಶುಕೂರ್, ಕಂದಗಲ್ಲು ಗ್ರಾ.ಪಂ. ಸದಸ್ಯ ಹೆಚ್. ಪರುಸಪ್ಪ, ಬತ್ತನಹಳ್ಳಿ ಗ್ರಾ.ಪಂ. ಸದಸ್ಯ ಪ್ರಸನ್ನ (ಟೋಕ), ಗ್ರಾಮ ಲೆಕ್ಕಾಧಿಕಾರಿ ತಳವಾರ ಪ್ರಭು, ಗಜಾಪುರ ಗ್ರಾಮದ ಗ್ರಾ.ಪಂ. ಮಾಜಿ ಸದಸ್ಯರಾದ ಬೆಳದೇರಿ ಮಲ್ಲಿಕಾರ್ಜುನ, ಎಸ್‌ಡಿಎಂಸಿ ಅಧ್ಯಕ್ಷ ಡಿ. ಗಾಳೆಪ್ಪ, ಉಪಾಧ್ಯಕ್ಷೆ ಎನ್. ಸಿದ್ದಮ್ಮ ಉಪಸ್ಥಿತರಿದ್ದರು.

ಬೇಲ್ದಾರ್ ಸಂಘದ ಅಧ್ಯಕ್ಷ ವಿ. ಹಂಪಣ್ಣ, ಗ್ರಾಮದ ಮುಖಂಡರಾದ ಕಾಳಾಪುರ ಮರಿಯಪ್ಪ, ಅಂಗಡಿ ಈರಪ್ಪ, ಗಜಾಪುರ ಗ್ರಾಮದ ಯುವಕರಾದ ತಳವಾರ ಶಿವರಾಜ, ಕಾಳಾಪುರ ರಾಜ, ಬಾರಿಕರ ಪರುಸಪ್ಪ, ಹೆಚ್. ಸುರೇಶ್, ಅಂಗಡಿ ಕೊಟ್ರೇಶ್, ಕೆ. ಮಲ್ಲೇಶ್, ಕೆ. ಕೋಟಿ ಲಿಂಗನಗೌಡ, ನಾಣ್ಯಾಪುರ ಮಾರುತಿ, ತಳವಾರ ಉದಯ, ಅಂಗಡಿ ಗಣೇಶ, ಕೆ. ಪವನ್, ಟಿ. ಕಿರಣ, ಬಿ. ಗುರು, ಶಿವಲಿಂಗ, ಬಿ. ಸುನೀಲ್, ಎ. ರಮೇಶ್, ಡಿ. ಪ್ರಕಾಶ್, ಟಿ. ದುರುಗೇಶ್   ಮತ್ತಿತರರು ಹಾಜರಿದ್ದರು.

error: Content is protected !!