ಕಾರ್ಪೊರೇಟ್‌ ವಲಯದ ಕಾರ್ಯ ನಿರ್ವಾಹಕ ಹುದ್ದೆಗಳು ಬಾಡಿಗೆಯಾಧಾರಿತ

ಬಾಪೂಜಿ ಎಂ.ಬಿ.ಎ. ಕಾಲೇಜಿನಲ್ಲಿ ವಿಕ್ರಮ್‌

ದಾವಣಗೆರೆ, ಫೆ.8- ಕಾರ್ಪೊರೇಟ್‌ ವಲಯ, ಸಂಸ್ಥೆಗಳಲ್ಲಿನ ಕಾರ್ಯನಿರ್ವಾಹಕ ಹುದ್ದೆಗಳು ಇನ್ನು ಮುಂದೆ ಖಾಯಂ ಆಗಿರದೇ ಕೇವಲ ಸಂಬಂಧಿಸಿದ ಯೋಜನಾ ಅವಧಿಗಷ್ಟೇ ಸೀಮಿತವಾಗಲಿದೆ ಎಂದು ಬೆಂಗಳೂರಿನ ಆಚಾರ್ಯ ಸಮೂಹದ ಉಪ ಮುಖ್ಯಾಧಿಕಾರಿ ಎ.ಜಿ. ವಿಕ್ರಂ ಅಭಿಪ್ರಾಯ ಪಟ್ಟರು.

ನಗರದ ಬಾಪೂಜಿ ವಿದ್ಯಾಸಂಸ್ಥೆಯ ಮೇನೇಜ್‌ಮೆಂಟ್‌ ಕಾಲೇಜಿನಲ್ಲಿ ನಿನ್ನೆ ಏರ್ಪಾಡಾಗಿದ್ದ ನೂತನ ವಿದ್ಯಾರ್ಥಿಗಳ ಶೈಕ್ಷಣಿಕಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಪೊರೇಟ್‌ ವಲಯವು ಹೊಸ ಪೀಳಿ ಗೆಯ ನಿರೀಕ್ಷೆಗಳಿಗನುಗುಣವಾಗಿ ರೂಪಿಸುವ ಯೋಜನೆಗಳ ಅನುಷ್ಠಾನದಲ್ಲಿ ಬಾಡಿಗೆ ಯಾಧಾರಿತ ಕಾರ್ಯನಿರ್ವಹಣಾಧಿಕಾರಿಗಳನ್ನು ನೇಮಿಸಿಕೊಂಡು ಅಂತಹವರ ವಿಶ್ಲೇಷಣಾ ಮತ್ತು ಅಂಕಿ-ಅಂಶ ವಿಜ್ಞಾನ, ಮಾಹಿತಿ ವಿಜ್ಞಾನ ತಜ್ಞರನ್ನೇ ಇದಕ್ಕೆ ನಿರೀಕ್ಷಿಸಲಿದೆ ಎಂದರಲ್ಲದೇ ಜ್ಞಾನ ಸಂಪಾದನೆಯಷ್ಟೇ ಮಹತ್ವವನ್ನು ಕೌಶಲ್ಯ ಪ್ರಾಪ್ತಿಗೂ ಮೇನೇಜ್‌ಮೆಂಟ್‌ ವಿದ್ಯಾರ್ಥಿಗಳು ನೀಡಬೇಕಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹರಿಹರದ ಸಿಂಥೈಟ್‌ ಕೈಗಾರಿಕಾ ಮಾನವ ಸಂಪನ್ಮೂಲ ವ್ಯವಸ್ಥಾಪಕ ಎಂ. ಅನಂತಕೃಷ್ಞ ಅವರು, ಯಶಸ್ಸು ಬಯಸುವವರು ಪ್ರಥಮ ಅವಕಾಶವನ್ನೆಂದೂ ಬಿಡಬಾರದು, ಮುಂದೆ ನೋಡೋಣವೆಂದು ಬಿಟ್ಟರೆ ಮುಂದಿನ ಅವಕಾಶಗಳು ಮತ್ತಷ್ಟು ಜಟಿಲವಾಗಬಹುದು, ಕಾರ್ಪೊರೇಟ್‌ ವಲಯದಲ್ಲಿ ಉಳಿಯಬೇಕೆಂದರೆ ಕಲಿಕೆ, ಮತ್ತೂ ಕಲಿಕೆ, ಪುನಃ ಪುನಃ ಕಲಿಕೆ ಅನಿವಾರ್ಯವೆಂದರು.

ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಅಧ್ಯಕ್ಷೀಯ ನುಡಿಗಳನ್ನಾಡಿದರು. ವಿಭಾಗ ಮುಖ್ಯಸ್ಥರುಗಳಿಂದ ಸತೀಶ್‌ ರಾಯ್ಕರ್‌, ಡಾ. ಎಸ್‌.ಹೆಚ್‌. ಸುಜಿತ್‌ಕುಮಾರ್, ಪ್ರಾಚಾರ್ಯ ಡಾ. ನವೀನ್‌ ನಾಗರಾಜ್, ಡಾ. ಶ್ರುತಿ ಮಾಕನೂರು, ಪ್ರೊ. ಅಳಲಗೇರಿ ಮುಂತಾದವರು ಉಪಸ್ಥಿತರಿದ್ದು ಸ್ಪಂದನಾ ಪ್ರಾರ್ಥನೆ ಹಾಡಿದರು.

error: Content is protected !!