ಮಲೇಬೆನ್ನೂರು, ಜು.2- ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಜಿ.ಆರ್.ಚಂದ್ರಪ್ಪ, ಉಪಾಧ್ಯಕ್ಷರಾದ ಶ್ರೀಮತಿ ರಶ್ಮಿ ವಿಜಯಭಾಸ್ಕರ, ರಂಗನಾಥ್, ಬಾಲಕೇಂದ್ರದ ಅಧ್ಯಕ್ಷ ಡಿ.ಪಿ.ಚಿದಾನಂದ್, ವಿಜಯ್ ಭಾಸ್ಕರ್, ಮುಖ್ಯೋಪಾಧ್ಯಾಯ ಕರಿಬಸಪ್ಪ, ಶಿಕ್ಷಕರಾದ ನಾಗೇಶ್, ಶ್ರೀನಿವಾಸ್ ರೆಡ್ಡಿ, ನಿಂಗರಾಜ್, ಗುಡ್ಡಪ್ಪ, ಲೋಕೇಶ್ ಹಾಗೂ ಮತ್ತಿತರರಿದ್ದರು.
December 27, 2024