ದಾವಣಗೆರೆ, ಜು.2- ನಗರದ ಯುವಕರು ನಿರ್ಮಿಸುತ್ತಿರುವ `ACMI ಸೆಕ್ಷನ್ 153A’ ಎಂಬ ಕಿರುಚಿತ್ರದ ಪೂಜಾ ಸಮಾರಂಭವು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಇಂದು ಸರಳವಾಗಿ ನಡೆಯಿತು.
ಪೂಜಾ ಕಾರ್ಯಕ್ರಮವನ್ನು ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ ಅವರು ಕ್ಲಾಪ್ ಮಾಡುವ ಮುಖಾಂತರ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರವು ಥ್ರಿಲ್ಲರ್ ಮತ್ತು ಸಸ್ಪೆನ್ಸ್‌ನಿಂದ ಕೂಡಿದ್ದು, ದಾವಣಗೆರೆಯ ಯುವಕರು ಕಿರುಚಿತ್ರ ಮಾಡುತ್ತಿರುವುದು ಸಂತಸವಾಗಿದೆ ಎಂದರು.
ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಮಾಜಿ ಮಹಾಪೌರ ಗೋಣೆಪ್ಪ, ಚಿತ್ರದ ನಿರ್ಮಾಪಕ ವೆಂಕಟೇಶ್ ಎಂ.ಗೌಡ, ನಿರ್ದೇಶಕ ವೃಷಭ್ ಗೊಸರ್, ಛಾಯಾಗ್ರಾಹಕ ಇ.ಎನ್.ದೀಪಕ್, ಮನಂಗಿ ರಾಹುಲ್, ಸಂಗೀತ ನಿರ್ದೇಶಕ ವರುಣ್ ವಿ.ಗೌಡ ಮತ್ತು ಚಿತ್ರ ತಂಡದ ಚಂದನ್, ಚೇತನ್ ಬೋವಿದಾದ, ಪ್ರಿಯಾಂಕಾ, ಪುಣ್ಯವತಿ, ನಮ್ರತಾ, ಮಂಜು ಕಿಚ್ಚ, ಈಶ್ವರ್, ತರುಣ್, ನಿಖಿಲ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.