ಸಿದ್ದರಾಮಯ್ಯಗೆ ಜೈಕಾರ
ಅಪಾರ ಪ್ರಮಾಣದಲ್ಲಿ ಸೇರಿದ್ದ ಸಿದ್ಧರಾಮಯ್ಯ ಅಭಿಮಾನಿಗಳು ಕೊರೊನಾ ರೋಗದ ಭಯ ಬಿಟ್ಟು ಹಸ್ತಲಾಘವ ಮಾಡಲು ಹೋದಾಗ ನೂಕು ನುಗ್ಗಲು ಹೆಚ್ಚಾಗಿ ಅಂತರವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರು. §ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜೈ ಜೈ¬ ಎಂದು ಅಭಿಮಾನಿಗಳು ಜೈಕಾರ ಹಾಕಿದರು.
ಹರಿಹರ, ಜು.2- ಶಾಸಕ ಎಸ್. ರಾಮಪ್ಪ ಅವರ ಪುತ್ರಿ ಹಂಸಲತಾ ಹಾಗೂ ಹೃಷಿಕೇಶ್ ಅವರ ವಿವಾಹ ಮಹೋತ್ಸವವು ನಗರದ ಶ್ರೀ ಸಿದ್ದೇಶ್ವರ ಪ್ಯಾಲೇಸ್ನಲ್ಲಿ ಇಂದು ಸರಳವಾಗಿ ನಡೆಯಿತು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರುಗಳಾದ ಎಸ್.ಎಸ್. ಮಲ್ಲಿಕಾರ್ಜುನ್, ಹೆಚ್. ಆಂಜನೇಯ, ಪಿ.ಟಿ. ಪರಮೇಶ್ವರನಾಯ್ಕ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಸೇರಿದಂತೆ ಹಲವು ಗಣ್ಯರು ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕ ರಾಮಪ್ಪ, ಪತ್ನಿ ಜಯಮ್ಮ, ಮದುಮಗ ಹೃಷಿ ಕೇಶ್ ಅವರ ತಾಯಿ ಕೆ. ನಂದಾ, ಡಾ.ಕೆ. ಸಾಯಿಬಾಬಾ, ಯತಿರಾಜ್, ಪೂಜಾ ಹಾಗೂ ಗಣ್ಯರು, ರಾಜಕೀಯ ಧುರೀಣರು ಕುಟುಂಬದ ಸದಸ್ಯರು ಹಾಜರಿದ್ದರು.