ದಾವಣಗೆರೆ, ಏ.8- ಜಿಲ್ಲೆಯಲ್ಲಿ ಗುರುವಾರ 28 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 186ಕ್ಕೆ ಏರಿಕೆಯಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 27 ಹಾಗೂ ಹರಿಹರ ತಾಲ್ಲೂಕಿನ ಒಬ್ಬರಲ್ಲಿ ಸೋಂಕು ಕಾಣಿಸಿ ಕೊಂಡಿದ್ದು, 22 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.
ಎಂಬಿಎ ವಿದ್ಯಾರ್ಥಿನಿಗೆ ಸೋಂಕು: ನಗರದ ಖಾಸಗಿ ಎಂ.ಬಿ.ಎ ಕಾಲೇಜಿನ ವಿದ್ಯಾರ್ಥಿನಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ವಿದ್ಯಾರ್ಥಿನಿ ಓದುತ್ತಿದ್ದ ತರಗತಿಯ ಬೋಧಕ, ಬೋಧಕೇತರು ಮತ್ತು ಮನೆಯವರು ಸೇರಿದಂತೆ 93 ಸಂಪರ್ಕಿತರ ಗಂಟಲು ಮಾದರಿ ದ್ರವವನ್ನು ಪರೀಕ್ಷೆಗಾಗಿ ಪಡೆಯಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ರಾಘವನ್ ತಿಳಿಸಿದ್ದಾರೆ.
ನಿನ್ನೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹಾಸ್ಟೆಲ್ನ ಎಲ್ಲಾ 134 ಸಂಪರ್ಕಿತರ ಸ್ಯಾಂಪಲ್ಗಳನ್ನು ಪರೀಕ್ಷೆ ಮಾಡಲಾಗಿದ್ದು, ಯಾರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ ಎಂದವರು ಹೇಳಿದ್ದಾರೆ.