ಜಗಳೂರು; ಚಿರತೆ ಓಡಾಟ, ಸಾರ್ವಜನಿಕರ ಆತಂಕ

ಜಗಳೂರು, ಫೆ.5- ತಾಲ್ಲೂಕಿನಲ್ಲಿ ಕೆಲ ತಿಂಗಳಿನಿಂದ ಚಿಕ್ಕಮಲ್ಲನಹೊಳೆ, ಗೊಲ್ಲರಹಟ್ಟಿ, ಮರೇನಹಳ್ಳಿ, ಅಣಬೂರು, ದಾವಣಗೆರೆ ರಸ್ತೆ, ಕೋರ್ಟ್ ಹಿಂಭಾಗ ಸೇರಿದಂತೆ ತಾಲ್ಲೂಕಿನ ಹಲವೆಡೆ  ಚಿರತೆಯೊಂದು ಓಡಾಡುತ್ತಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ.

ಬೆಳಗಿನ ವಾಯುವಿಹಾರಿಗಳು ನೆಮ್ಮದಿಯಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. 

ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಹಿಡಿಯಲು  ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿಯಲ್ಲಿ ಬೋನ್ ಅಳವಡಿಸಿದ್ದು ಚಿರತೆ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.

ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಪ್ರಕಾಶ್ ಮಾತನಾಡಿ, ಸಾಮಾಜಿಕ ವಲಯ  ಅರಣ್ಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ  ಜೊತೆಗೆ ಕಾರ್ಯಾಚರಣೆ ಆರಂಭವಾಗಿದೆ. ಮೂರು ದಿನಗಳಿಂದ ಬೋನನ್ನನು ಚಿರತೆ ಓಡಾಡುವ ಸ್ಥಳದಲ್ಲಿ ಇಡಲಾಗಿದೆ. 

ಎಲ್ಲೆಂದರಲ್ಲಿ ನವಿಲುಗಳನ್ನು ತಿಂದು ಹಾಕಿದ್ದು ಆ ಚಿರತೆ ಹೆಜ್ಜೆ ಗುರುತು ಕಂಡು ಹಿಡಿಯಲಾಗುತ್ತಿದೆ.

ಇಂದು ಬೆಳಿಗ್ಗೆ ಒಬ್ಬ ವ್ಯಕ್ತಿಗೆ ಚಿರತೆ ಕಾಣಿಸಿಕೊಂಡಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಯಾರೂ ಭಯಪಡುವ ಅಗತ್ಯವಿಲ್ಲ.  ಶೀಘ್ರದಲ್ಲೇ ಸೆರೆಹಿಡಿಯ ಲಾಗುವುದು ಎಂದರು. 

ತಾಲ್ಲೂಕಿನ ಗ್ರಾಮೀಣ ರಸ್ತೆಗಳಲ್ಲಿ ರಾತ್ರಿ ಮತ್ತು ಬೆಳಗಿನ ಜಾವ ದ್ವಿಚಕ್ರ ವಾಹನದಲ್ಲಿ ಮತ್ತು ವಾಯುವಿಹಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಶೀಘ್ರವೇ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು  ಒತ್ತಾಯಿಸಿದ್ದಾರೆ.

ಅರಣ್ಯ ಇಲಾಖೆ ಸಾಮಾಜಿಕ ವಲಯ ಅಧಿಕಾರಿ ಶ್ವೇತಾ. ಅರಣ್ಯ ಇಲಾಖೆಯ ಗಾರ್ಡ್ ಕಿರಣ್.  ನಿಸಾರ್ ಅಹಮ್ಮದ್. ಚೇತನ್. ಅಂಜಿನಪ್ಪ.ನಾಗರಾಜ್ ಮುರುಡಿಸ್ವಾಮಿ. ನಾಗರಾಜ್, ರಾಜಣ್ಣ, ಪ್ರದೀಪ್ ಸೇರಿದಂತೆ ಇತರರು ಸ್ಥಳದಲ್ಲಿದ್ದಾರೆ.

error: Content is protected !!