ತನ್ನದೇ ಆದ ಹಿರಿಮೆ ಹೊಂದಿರುವ ಕಂದಾಯ ಇಲಾಖೆ

ಹರಿಹರ : ಕಂದಾಯ ದಿನಾಚರಣೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ

ಹರಿಹರ, ಜು.1- ಕಂದಾಯ ಇಲಾಖೆಗೆ ತನ್ನದೇ ಆದ ಹಿರಿಮೆ ಇದ್ದು, ಇಲಾಖೆಯ ಸಿಬ್ಬಂದಿಗಳು ರೈತರಿಗೆ ಮತ್ತು ಬಡವರಿಗೆ ಸೂಕ್ತ ಸಮಯಕ್ಕೆ ಸರ್ಕಾರದ ಯೋಜನೆ ಗಳನ್ನು ತಲುಪಿಸುವ ಮೂಲಕ ಇಲಾಖೆಯ ಘನತೆ, ಗೌರವಗಳಿಗೆ ಧಕ್ಕೆ ಬರದಂತೆ ಕಾರ್ಯ ನಿರ್ವಹಿಸಲು ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಹೇಳಿದರು.

ನಗರದ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ಕಂದಾಯ ದಿನಾ ಚರಣೆ  ಕಾರ್ಯಕ್ರಮದ ಅಂಗ ವಾಗಿ ಸಸಿಗಳನ್ನು ನೆಟ್ಟು ನಂತರ ನಡೆದ ಸಮಾ ರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಆರೋಗ್ಯ, ಶಿಕ್ಷಣ, ನಗರಾಭಿ ವೃದ್ಧಿ, ಕಾನೂನು, ಲೋಕೋಪ ಯೋಗಿ, ಕೃಷಿ, ಆಹಾರ, ಸೇರಿದಂತೆ, ಯಾವುದೇ ಇಲಾಖೆಯ ಅಡಿಯಲ್ಲಿ  ಬರುವ ಯೋಜನೆಯನ್ನು ಜನರಿಗೆ ಒದಗಿಸಬೇಕಾದರೆ ಅದಕ್ಕೆ ಪೂರಕವಾಗಿ ಹಣ ಒದಗಿಸಬೇಕು. ಇದನ್ನು ಅರಿತು ತೆರಿಗೆ ರೂಪದಲ್ಲಿ ಹಣವನ್ನು ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ತಂದು ಆ ಹಣದಿಂದ ಎಲ್ಲಾ ಇಲಾ ಖೆಯ ಮೂಲಕ ಜನರಿಗೆ ಯೋಜನೆಗಳನ್ನು ಸರಿಯಾದ ಸಮ ಯಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು ಎಂದು ಅವರು ವಿವರಿಸಿದರು.

 ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಲೋಹಿತ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಅವರ ಆಡಳಿತದ ಅವಧಿಯಲ್ಲಿ ಉಳುವವನೇ ಭೂಮಿ ಒಡೆಯ ಅನ್ನುವ ಕಾನೂನು ಜಾರಿಗೆ ತಂದು ಬಡವರಿಗೆ, ದಲಿತರಿಗೆ ಅಸ್ಪೃಶ್ಯರಿಗೆ ಜಮೀನನ್ನು ಕೊಡಿಸಿದರು. ಇದರಿಂದ ಕಂದಾಯ ಹೆಚ್ಚು ಬರುವಂತಹ ವ್ಯವಸ್ಥೆ ಆಗಿ, ಕಂದಾಯ ಇಲಾಖೆ ಬಹಳಷ್ಟು ಸುಧಾರಣೆ ಕಂಡಿತು ಎಂದು ಹೇಳಿದರು.

ರವಿ ಮಲೇಬೆನ್ನೂರು ಮತ್ತು ಗ್ರೇಡ್ 2 ತಹಶೀಲ್ದಾರ್‌ ಶಶಿಧರ್ ಅವರುಗಳು ಮಾತನಾಡಿದರು.

ಈ ಸಂದರ್ಭದಲ್ಲಿ ಆನಂದ್, ಸಮೀರ್, ಹೇಮಂತ್, ಮಲ್ಲಿ ಕಾರ್ಜುನ, ಡಿ. ಬಸವರಾಜ್, ಪ್ರಭುಸ್ವಾಮಿ, ಜಬೀವುಲ್ಲಾ, ಭಾರತಿ, ಸಂಗೀತಾ, ಕೊಟ್ರೇಶ್, ಸೋಮಣ್ಣ, ಮಂಜು ನಾಥ್, ಉಮೇಶ್, ದೇವರಾಜ್, ವೀಣಾ, ನರಸಮ್ಮ, ಕರಿಬಸಮ್ಮ, ಲಕ್ಷ್ಮಿ, ಶರೀಫ್, ಸಂತೋಷ್, ಸುಧೀರ್ ನಾಯ್ಕ್, ಆರಿಫ್, ಜಗದೀಶ್, ಶಿವಕುಮಾರ್ ಇನ್ನಿತರರಿದ್ದರು.

error: Content is protected !!