ಮಲೇಬೆನ್ನೂರು, ಫೆ.3- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇದೇ ದಿನಾಂಕ 8 ಮತ್ತು 9 ರಂದು ಜರುಗಲಿರುವ 3ನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವದ ಮಹಾಮಂಟಪ ನಿರ್ಮಾಣಕ್ಕೆ ಸೋಮವಾರ ಹಂದರ ಕಂಬ ಪೂಜೆಯನ್ನು ಸಲ್ಲಿಸಲಾಯಿತು.
ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹಂದರ ಕಂಬ ಪೂಜೆ ಸಲ್ಲಿಸಿ, ಕಂಬ ನೆಟ್ಟು, ಜಾತ್ರೆಯ ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸಿದರು. ನಂತರ ಮಾತನಾಡಿದ ಶ್ರೀಗಳು ಈ ಬಾರಿ ಅರ್ಥಪೂರ್ಣ ಜಾತ್ರೆಯ ಮೂಲಕ ನಾಡಿಗೆ ಉತ್ತಮ ಸಂದೇಶ ನೀಡಲಾಗುವುದೆಂದರು.
ಮಠದ ಆಡಳಿತಾಧಿಕಾರಿ ಡಿ. ಓಬಳಪ್ಪ, ಕಾರ್ಮಿಕ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ, ಜಾತ್ರಾ ಸಮಿತಿ ಸಂಚಾಲಕ ಹೊದಿಗೆರೆ ರಮೇಶ್, ಮಠದ ಧರ್ಮದರ್ಶಿಗಳಾದ ಹರ್ತಿಕೋಟೆ ವೀರೇಂದ್ರ ಸಿಂಹ, ನಲುವಾಗಲು ನಾಗರಾಜಪ್ಪ, ಕೆ.ಬಿ. ಮಂಜುನಾಥ್, ವಾಲ್ಮೀಕಿ ವಿಜಯ ಸ್ಮರಣೆ ಸಂಪುಟದ ಸಂಪಾದಕ ಡಾ.ಎ.ಬಿ. ರಾಮಚಂದ್ರಪ್ಪ, ಉಪವಿಭಾಗಾ ಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಉಪಸ್ಥಿತರಿದ್ದರು.
ಸಿಪಿಐ ಸತೀಶ್, ಪಿಎಸ್ಐ ರವಿಕುಮಾರ್, ಪಿಡಬ್ಲ್ಯೂಡಿ ಇಇ ಮಲ್ಲಿಕಾರ್ಜುನ್, ಜಿ.ಪಂ. ಉಪಕಾರ್ಯದರ್ಶಿ ಆನಂದ್, ಭಾನುವಳ್ಳಿ ಪುಟ್ಟಪ್ಪ, ಸಣ್ಣ ತಮ್ಮಪ್ಪ ಬಾರ್ಕಿ, ಜಿಗಳಿ ಆನಂದಪ್ಪ, ಕೊಕ್ಕನೂರು ಕೊಟ್ರಪ್ಪ, ಡಿ. ಸೋಮಶೇಖರ್, ವಿಜಯಶ್ರೀ, ಗೌರಮ್ಮ, ಪಾರ್ವತಿ, ರಾಘು ದೊಡ್ಡಮನಿ, ಹೆಚ್. ಚಂದ್ರಪ್ಪ, ಪತ್ರಕರ್ತ ಜಿಗಳಿ ಪ್ರಕಾಶ್, ಮಕರಿ ಪಾಲಾಕ್ಷಪ್ಪ, ಪಾಳೇಗಾರ್ ನಾಗರಾಜ್, ರಾಜನ ಹಳ್ಳಿ ಭೀಮಣ್ಣ ಮತ್ತಿತರರು ಹಾಜರಿದ್ದರು.