ಜಗಳೂರು, ಫೆ.3 – ತಾಲ್ಲೂಕಿನ ಚದರಗೊಳ್ಳ ಶ್ರೀ ಉಮಾಮಹೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಗುತ್ತಿದುರ್ಗದ ಶಾನುಭೋಗ ಕೆ. ವೆಂಕಟರಾವ್ ಸೇವಾ ಟ್ರಸ್ಟ್ ಪ್ರತಿಷ್ಠಾನದ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
2019 ಮತ್ತು 2020 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಂದನಾ ಮತ್ತು ಲೋಕೇಶ್ ಅವರನ್ನು ಪ್ರತಿಷ್ಠಾನದ ಅಧ್ಯಕ್ಷಜಿ ವಿ. ಕೃಷ್ಣಮೂರ್ತಿರಾವ್ ಮತ್ತು ಸದಸ್ಯರಾದ ಜಿ.ಕೆ. ಸ್ವರೂಪ ಪುರಸ್ಕರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಜಯಶೀಲ ರೆಡ್ಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಕುಮಾರ್ ಮತ್ತು ದ್ಯಾಮಣ್ಣ ಆಗಮಿಸಿದ್ದರು.
ಸಮಾರಂಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ನ್ಯಾಯಾಂಗ ಇಲಾಖೆಯ ನಿವೃತ್ತ ಶಿರಸ್ತೇದಾರ್ ಜಿ. ಕೆ. ನಾಗರಾಜ್ ರಾವ್ ಹಾಜರಿದ್ದರು.
ಹೆಚ್.ಟಿ. ವೀರೇಶ್ ಸ್ವಾಗತಿಸಿದರು. ಎಸ್. ಎನ್. ತಿಪ್ಪೇಸ್ವಾಮಿ ವಂದಿಸಿದರು. ಪುರಸ್ಕಾರದ ಜೊತೆಗೆ 2000 ರೂ. ನಗದು, ನೆನಪಿನ ಕಾಣಿಕೆ ಪ್ರಶಸ್ತಿ ಪತ್ರವನ್ನು ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ನಾಗರಾಜ್ ರಾವ್ ಮತ್ತು ಸದಸ್ಯರು ವಿತರಿಸಿದರು.