ಶಾಸಕ ಅರುಣಕುಮಾರ ಪೂಜಾರ್
ರಾಣೇಬೆನ್ನೂರು, ಏ.5- ನನ್ನ ಕ್ಷೇತ್ರದಲ್ಲಿ ಪ್ರತಿಭಾವಂತರ ಸಂಖ್ಯೆ ಹೆಚ್ಚಾಗಬೇಕು. ಈ ಕ್ಷೇತ್ರ ಶಿಕ್ಷಣದಲ್ಲಿ ಮಾದರಿ ಆಗಬೇಕು ಎನ್ನುವ ಕನಸು ನನ್ನದಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಅವರು ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕಟ್ಟಲಾದ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಕರು ನಗರದಿಂದ ಸೇವಾ ಸ್ಥಳಕ್ಕೆ ಆಗಮಿಸಲು ಸಾರಿಗೆ ಜೊತೆ ಅನೇಕ ಸಮಸ್ಯೆಗಳಿವೆ. ಹಾಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುತ್ತಿಲ್ಲ ಎನ್ನುವ ಅರಿವು ನನಗೆ ಬಂದಿದ್ದು, ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚಿಸಿದ್ದೇನೆ. ಹಾಗಾಗಿ ಶಿಕ್ಷಕರಿಗೆ ಬೈಕ್, ಶಿಕ್ಷಕಿಯರಿಗೆ ಸ್ಕೂಟಿ ಕೊಡಿಸುವ ಆಲೋಚನೆ ನನ್ನದಾಗಿದೆ ಎಂದು ಶಾಸಕ ಪೂಜಾರ ಹೇಳಿದರು. ನಾನು ಶಂಕುಸ್ಥಾಪನೆ ಮಾಡಿದ ಕಾಮಗಾರಿಗಳು ನನ್ನಿಂದಲೇ ಉದ್ಘಾಟನೆಗೊ ಳ್ಳಬೇಕು. ನಾನು ಪೂಜೆ ಮಾಡಿದ ಕಾಮಗಾರಿಯನ್ನು ಇನ್ಯಾರೋ ಬಂದು ಉದ್ಘಾಟನೆ ಮಾಡು ವುದು ಸರಿಯಲ್ಲ. ಕೊರೊನಾ ಸಂಕಷ್ಟದ ಸಮಯದಲ್ಲೂ ಸಹ ಈ ಬಗ್ಗೆ ಎಚ್ಚರ ವಹಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಗ್ರಾ.ಪಂ. ಅಧ್ಯಕ್ಷೆ ಚಂದ್ರಮ್ಮ ಹಿರೇಮರದ, ಉಪಾಧ್ಯಕ್ಷೆ ಮಂಜುಳಾ ಪಾಟೀಲ್, ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಶಿಕ್ಷಣಾಧಿಕಾರಿ ಗುರುಪ್ರಸಾದ್, ಮುಖಂಡರಾದ ಹರಿಹರ ಗೌಡ ಪಾಟೀಲ, ಸಿ.ಪಿ. ಪಾಟೀಲ ಇನ್ನಿತರರಿದ್ದರು.