ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಹರಪನಹಳ್ಳಿ ತಾಲ್ಲೂಕು ಐಎಂಎಫ್ ಅಧ್ಯಕ್ಷ ಡಾ.ಮಹೇಶ್
ಹರಪನಹಳ್ಳಿ, ಜ.31- ಪೋಲಿಯೋ ನಿರ್ಮೂಲನೆಗೆ ಆರೋಗ್ಯ ಇಲಾಖೆ ಆಯೋಜಿಸಿರುವ ಕಾರ್ಯಕ್ರಮಕ್ಕೆ ಖಾಸಗಿ ವೈದ್ಯಕೀಯ ಸಂಘವು ಸಂಪೂರ್ಣ ಸಹಕಾರ ನೀಡಿ ಪೋಲಿಯೋ ಮುಕ್ತ ಸಮಾಜವನ್ನು ನಿರ್ಮಿಸೋಣ ಎಂದು ತಾಲ್ಲೂಕು ಐಎಂಎಫ್ ಅಧ್ಯಕ್ಷ ಡಾ.ಮಹೇಶ್ ಮನವಿ ಮಾಡಿದರು.
ಚಿಕ್ಕೇರಿ ಗುಂಡಿ ಬಳಿ ಇರುವ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾಮಾರಿ ಪೋಲಿಯೋವನ್ನು ಹೊಡೆದೋಡಿಸಲು ಸರ್ಕಾರ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದರಿಂದ ದೇಶದಲ್ಲಿ ಪೋಲಿಯೋ ಪೀಡಿತರ ಸಂಖ್ಯೆ ಕ್ಷೀಣಿಸಿದ್ದು, ಮತ್ತೆ ಮರುಕಳಿಸದಂತೆ ಜಾಗೃತರಾಗಿರಲು 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್ ಮಾತ ನಾಡಿ, 2011 ರಿಂದ ದೇಶದಲ್ಲಿ ಪೋಲಿಯೋ ಪ್ರಕರ ಣಗಳು ಗೋಚರಿಸಿಲ್ಲ. ನೆರೆ ದೇಶಗಳಾದ ಪಾಕಿಸ್ತಾನ, ಬಾಂಗ್ಲಾಗಳಲ್ಲಿ ಪೋಲಿಯೋ ಪ್ರಕರಣಗಳು ಇರುವು ದರಿಂದ ಭಾರತದಲ್ಲಿ ಮುಂಜಾಗ್ರತೆಗಾಗಿ ವರ್ಷಕ್ಕೆ ಒಂದು ಬಾರಿ ಲಸಿಕೆ ಹಾಕಲಾಗುತ್ತಿದೆ. ತಾಲ್ಲೂಕಿನಲ್ಲಿ 191 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. 5 ವರ್ಷ ದೊಳಗಿನ ಒಟ್ಟು 29,884 ಮಕ್ಕಳನ್ನು ಗುರುತಿಸಲಾ ಗಿದೆ. ಮನೆ ಮನೆಗೂ ತೆರಳಿ ಲಸಿಕೆಯನ್ನು ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಎಲ್.ಮಂಜ್ಯಾನಾಯ್ಕ್ ಅವರು ಮಕ್ಕಳಿಗೆ ಪೋಲಿಯೋ ಲಸಿಕೆ ಹನಿ ಹಾಕಿ ಮಾತ ನಾಡಿ, ಹಣ, ಆಸ್ತಿ, ಅಧಿಕಾರ ಬಡವ ಯಾರೇ ಆಗಿರಲಿ ಆರೋಗ್ಯವಂತರಾಗಿದ್ದರೆ ಮಾತ್ರ ಅನುಭೋಗ ಮಾಡಬಹುದು. ಆದ್ದರಿಂದ ಮೊದಲು ಆರೋಗ್ಯಕ್ಕೆ ಮಹತ್ವ ನೀಡಿ ಮಕ್ಕಳನ್ನು ಸದೃಢರಾಗಿರಲು ಪೋಲಿಯೋದಿಂದ ಮುಕ್ತರಾಗಿಸಲು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಆರೋಗ್ಯ ಇಲಾ ಖೆಯ ಅಧಿಕಾರಿಗಳೊಂದಿಗೆ ಸ್ಪಂದಿಸಿ ಪೋಲಿಯೋ ಮುಕ್ತ ಭಾರತ ನಿರ್ಮಾಣ ಮಾಡಬೇಕು ಎಂದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧ್ಯಕ್ಷ ಅರುಣ ಪೂಜಾರ್ ಮಾತನಾಡಿ, ಉಜ್ವಲ ಭಾರತದ ಭವಿಷ್ಯಕ್ಕೆ ಸದೃಢ ಆರೋಗ್ಯವಂತ ಮಕ್ಕಳು ಬೇಕು. ಪೋಲಿಯೋ ರೋಗ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆ ಉಂಟು ಮಾಡುತ್ತದೆ. ಪ್ರತಿ ವರ್ಷ ನಡೆಯುತ್ತಿರುವ ಪಲ್ಸ್ ಪೋಲಿಯೋ ಲಸಿಕೆಯ ಹನಿಗಳನ್ನು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಹಾಕಿಸಿ ಸದೃಢ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಬೇಕು ಎಂದರು.
ಪಟ್ಟಣದ ಒಂದನೇ ವಾರ್ಡ್ ಚಿತ್ತಾರಗೇರಿಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಪುರಸಭೆ ಸದಸ್ಯ ಜಾಕೀರ್ ಸರ್ಖಾವಸ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ವಿಜಯಕುಮಾರ್, ಡಾ.ಹಾಲಸ್ವಾಮಿ, ಡಾ. ಶ್ವೇತ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್. ಗೌರಮ್ಮ, ಭುವನೇಶ್ವರಿ, ಗೃಹರಕ್ಷಕ ಅಧಿಕಾರಿ ಮಂಜುನಾಥ ಸ್ವಾಮಿ, ವಾಗೀಶ್ ಪೂಜಾರ್ ಹಾಗೂ ಇತರರು ಭಾಗವಹಿಸಿದ್ದರು.