ಹೊನ್ನಾಳಿ ಪಟ್ಟಣ ಪಂಚಾಯಿತಿ ಆಯ-ವ್ಯಯ ಪೂರ್ವಭಾವಿ ಸಭೆಯಲ್ಲಿ ಪ.ಪಂ. ಅಧ್ಯಕ್ಷ ಕೆ.ವಿ. ಶ್ರೀಧರ್
ಹೊನ್ನಾಳಿ, ಜ.28- ಶುದ್ದ ಕುಡಿಯುವ ನೀರಿನ ಘಟಕ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದ್ದು ನಗರ ಪ್ರದೇಶದ ಜನರಿಗೂ ಶುದ್ದ ಕುಡಿಯುವ ನೀರು ಘಟಕದ ನೀರನ್ನು ಕೊಡಲಾಗುವುದು ಎಂದು ಪ.ಪಂ. ಅಧ್ಯಕ್ಷ ಕೆ.ವಿ. ಶ್ರೀಧರ್ ಹೇಳಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ 2021-22 ಸಾಲಿನ ಅಂದಾಜು ಆಯ-ವ್ಯಯ ಸಾರ್ವಜನಿಕ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಈಗಾಗಲೇ ಒಂದು ಶುದ್ದ ನೀರಿನ ಘಟಕ ಪ್ರಾರಂಭವಾಗಿದ್ದು ಕೆಲವೇ ದಿನಗಳಲ್ಲಿ ನಾಗರಿಕರಿಗೆ ಶುದ್ದ ನೀರು ಕೊಡಲಾಗುವುದು ಮತ್ತು ತುಂಗಭದ್ರಾ ಬಡಾವಣೆ ಹಳೆ ಸೌದೆ ಡಿಪೋ ಕಡೆಗಳಲ್ಲಿ ಶುದ್ಧ ನೀರು ಘಟಕ ಪ್ರಾರಂಭಿಸಲಾಗುವುದು ಎಂದು ನಾಗರಿಕರಿಗೆ ಭರವಸೆ ನೀಡಿದ ಅವರು, ಪಟ್ಟಣದ ಕನಕ ರಂಗಮಂದಿರ ನವೀಕ ರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಪಟ್ಟ ಣದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದರು.
ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ಎಸ್.ಆರ್ ವೀರಭದ್ರಯ್ಯ, ಪಟ್ಟಣದಲ್ಲಿ ಕುಡಿಯುವ ನೀರಿಗೆ 50 ಹೆಚ್.ಪಿ. ಮೋಟಾರ್‍ನಿಂದ ನೀರು ಸರಬರಾ ಜಾಗುತ್ತಿದ್ದು, ನಾಗರಿಕರಿಗೆ ನೀರಿನ ಸಮಸ್ಯೆ ಇರುವುದರಿಂದ ಪ.ಪಂ. ನಿಂದ ಹೆಚ್ಚುವರಿಯಾಗಿ 100 ಹೆಚ್.ಪಿ. ಮೋ ಟಾರ್ 5 ಹೊಸ ಟ್ಯಾಂಕ್‍ಗಳು ಹೆಚ್ಚುವರಿ ಪೈಪ್‍ಲೈನ್‍ಗಳಿ ಗಾಗಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ನಗರ ಪ್ರದೇಶದ ನಿವೇಶನ ರಹಿತರಿಗೆ ಶಾಸಕ ರೇಣುಕಾಚಾರ್ಯ ಶಿಫಾರಸ್ಸಿನಂತೆ ಮಲ್ಲದೇವರಕಟ್ಟೆ ಬಳಿ ಸರ್ಕಾರದಿಂದ 10 ಎಕರೆ ಜಮೀನು ಮಂಜೂರಾಗಿದ್ದು, ನಿವೇಶನ ರಹಿತರಿಗೆ ನಿವೇಶನ ನೀಡಲಾಗುವುದು.
ಪ.ಪಂ. ಸದಸ್ಯ ಮೈಲಪ್ಪ, ಸಮುದಾಯ ಸಂಘಟನಾಧಿಕಾರಿ ಸಿ.ಅಶೋಕ್, ರಾಮಚಂದ್ರಪ್ಪ ಕಂದಾಯಾಧಿಕಾರಿ, ಎನ್. ಪಿಸೆ ರಂಜಿತ, ಇಂಜಿನಿಯರ್ ಸಿ ದೇವರಾಜ, ಸಭೆಯಲ್ಲಿ ಕತ್ತಿಗೆ ನಾಗರಾಜ್, ಕರವೇ ಶ್ರೀನಿವಾಸ್, ಯೋಗೀಶ್, ಕೋಟೆ ನಂದೀಶ್, ಪ್ರವೀಣ್, ಬೀರಪ್ಪ ಮತ್ತು ಇತರರು ಇದ್ದರು.