ಸಾವಿಗೀಡಾದವರಲ್ಲಿ ಬ್ಯಾಂಕಿನ ಸದಸ್ಯರಾಗಿದ್ದ ಹೇಮಲತಾ ಅವರಿಗೆ ಪರಿಹಾರ.
– ಎನ್.ಎ. ಮುರುಗೇಶ್, ಅಧ್ಯಕ್ಷರು ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್
ದಾವಣಗೆರೆ,ಜ.27- ಧಾರವಾಡದ ಬಳಿ ಕಳೆದ ವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಡಿದ ನಗರದ ಎಲ್ಲಾ 10 ಜನ ಮಹಿಳೆಯರಿಗೆ ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.
ಬ್ಯಾಂಕಿನ ಸಭಾಂಗಣದಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎ. ಮುರುಗೇಶ್ ಅವರ ಅಧ್ಯಕ್ಷತೆಯಲ್ಲಿ ಇಂದು ಏರ್ಪಾಡಾಗಿದ್ದ ಬ್ಯಾಂಕಿನ ಮಾಸಿಕ ಸಭೆಯ ಆರಂಭದಲ್ಲಿ ಮೇಣದ ಬತ್ತಿ ಬೆಳಗಿಸುವುದರ ಮೂಲಕ ಮೃತರ ಆತ್ಮಕ್ಕೆ ಚಿರಶಾಂತಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸಲಾಯಿತು.
ರಸ್ತೆ ಅಪಘಾತದಲ್ಲಿ ಮಡಿದ 10 ಜನ ಮಹಿಳೆಯರಲ್ಲಿ ಶ್ರೀಮತಿ ಮಾನಸಿ (ಹೇಮಲತಾ) ಮತ್ತು ಅವರ ಪುತ್ರಿ ಕು. ಯಶ್ಮಿತಾ ಅವರುಗಳೂ ಸೇರಿದ್ದು, ಮಾನಸಿ ಅವರು ತಮ್ಮ ಬ್ಯಾಂಕಿನ ಸದಸ್ಯರಾಗಿದ್ದರು. ಅವರಿಗೆ ಬ್ಯಾಂಕಿನ ಸದಸ್ಯರ ಮರಣೋತ್ತರ ಪರಿಹಾರ ನಿಧಿಯಿಂದ 10 ಸಾವಿರ ರೂ.ಗಳ ಚೆಕ್ಕನ್ನು ಅವರ ಕುಟುಂಬ ವರ್ಗಕ್ಕೆ ನೀಡಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮುರುಗೇಶ್ ತಿಳಿಸಿದರು.
ಅಲ್ಲದೇ, ಬ್ಯಾಂಕಿನ ಎಲ್ಲಾ ಸದಸ್ಯರಿಗೂ ಅಪಘಾತ ವಿಮೆ ಮಾಡಿಸಲಾಗಿದ್ದು, ಇದರನ್ವಯ ಮಾನಸಿ ಅವರಿಗೆ ವಿಮಾ ಕಂಪನಿಯಿಂದ 1 ಲಕ್ಷ ರೂ. ಪರಿಹಾರ ಕೊಡಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುರುಗೇಶ್ ಅವರು ವಿವರಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಕಿರುವಾಡಿ ವಿ. ಸೋಮಶೇಖರ್, ನಿರ್ದೇಶಕರುಗಳಾದ ರಮಣ್ ಲಾಲ್ ಪಿ. ಸಂಘವಿ, ಎಸ್.ಕೆ. ವೀರಣ್ಣ, ಎ.ಹೆಚ್. ಕುಬೇರಪ್ಪ, ಕೃಷ್ಣಸಾ ಭೂತೆ, ಶಂಕರ್ ಖಟಾವ್ ಕರ್, ಶ್ರೀಮತಿ ಜಯಮ್ಮ ಪರಶುರಾಮಪ್ಪ, ಎಸ್.ಕೆ. ಪ್ರಭುಪ್ರಸಾದ್, ಶ್ರೀಮತಿ ಪಿ.ಎಂ. ಶಶಿಕಲಾ ರುದ್ರಯ್ಯ, ಕೆ.ಎಂ. ಜ್ಯೋತಿ ಪ್ರಕಾಶ್, ಪಿ.ಹೆಚ್. ವೆಂಕಪ್ಪ, ಬಿ.ನಾಗೇಂದ್ರಚಾರಿ, ಕೆ.ಹೆಚ್. ಶಿವಯೋಗಪ್ಪ, ಶ್ರೀಮತಿ ಅನಿಲಾ ಇಂಧೂದರ್ ನಿಶಾನಿಮಠ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಧಾನ ವ್ಯವಸ್ಥಾಪಕ ಎಂ. ಶಿವಲಿಂಗಸ್ವಾಮಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.