ಹೊನ್ನಾಳಿ, ಏ.1- ಹೊನ್ನಾಳಿ ತಾಲ್ಲೂಕು ಹಾಗೂ ನ್ಯಾಮತಿ ತಾಲ್ಲೂಕುಗಳಲ್ಲಿ ಈವರೆಗೆ 8,064 ಕೋವಿಡ್ ಲಸಿಕೆಗಳನ್ನು ನೀಡಿದ್ದು 2,701 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇಲ್ಲಿಯವರೆಗೆ 60 ಜನ ಕೋವಿಡ್ ಸೋಂಕಿತರು ಸಾವನ್ನಪ್ಪಿರುವುದಾಗಿ ಆರೋಗ್ಯಾಧಿಕಾರಿ ಡಾ.ಕೆಂಚಪ್ಪ ತಿಳಿಸಿದರು.
ಅವರು ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿಂದು ಉಪ ಕೇಂದ್ರ ಮಟ್ಟದ ಲಸಿಕಾ ಕೇಂದ್ರ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ತಾಲ್ಲೂಕಿನ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 28 ಉಪ ಕೇಂದ್ರಗಳಲ್ಲಿ ಹಾಗೂ ನ್ಯಾಮತಿಯ 5 ಪ್ರಾಥಮಿಕ ಆರೋ ಗ್ಯಕೇಂದ್ರದ 15 ಉಪ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೊಗ ಪಡೆದುಕೊಳ್ಳಬೇಕೆಂದರು.
ಸಭೆಯನ್ನು ತಹಶೀಲ್ದಾರ್ ಬಸವನಗೌಡ ಕೋಟೂರು ಉದ್ಘಾಟಿಸಿದರು. ಪಂಚಾಯ್ತಿ ಮುಖ್ಯ ಅಧಿಕಾರಿ ಅಶೋಕ್, ಡಾ. ಗುರುರಾಜ್, ಮಧು, ಕಿರಿಯ ಮಹಿಳಾ ಸಹಾಯಕಿ ಶಿಲ್ಪ, ಮಂಜುಳ, ಕೋಡಿಹಳ್ಳಿ ಜಗದೀಶ್ ಉಪಸ್ಥಿತರಿದ್ದರು.