ಗ್ರಾ.ಪಂ. ಚುನಾವಣೆ : 3 ಕಾಂಗ್ರೆಸ್, 2 ಬಿಜೆಪಿ, 1 ಅತಂತ್ರ

ರಾಣೇಬೆನ್ನೂರು, ಮಾ.31 – ಮೊನ್ನೆ ನಡೆದ ತಾಲ್ಲೂಕಿನ ಆರು ಗ್ರಾಮ ಪಂಚಾಯ್ತಿಗಳ ಚುನಾವಣೆಯ ಮತ ಎಣಿಕೆ ಇಂದು ಇಲ್ಲಿನ ರೋಟರಿ ಶಾಲೆಯಲ್ಲಿ ನಡೆದಿದ್ದು, ಮೂರು ಗ್ರಾ.ಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು, ಎರಡರಲ್ಲಿ ಬಿಜೆಪಿ ಬೆಂಬಲಿತರು ಆಡಳಿತ ಹಿಡಿದಿದ್ದು, ಒಂದು ಅತಂತ್ರ ಫಲಿತಾಂಶ ಬಂದಿದೆ.

ಮಾಳನಾಯ್ಕನಹಳ್ಳಿ, ಕುಪ್ಪೇಲೂರು ಮತ್ತು ಅಂತರವಳ್ಳಿ ಕಾಂಗ್ರೆಸ್ ಪಾಲಾದರೆ, ಜೋಯಿಸರಹರಳಹಳ್ಳಿಯ ಒಟ್ಟು 10 ಸ್ಥಾನಗಳಲ್ಲಿ 8 ಬಿಜೆಪಿ ಪಾಲಾಗಿವೆ.  ಸುಣಕಲ್ಲಬಿದರಿ 12 ಸ್ಥಾನಗಳಲ್ಲಿ 10 ಬಿಜೆಪಿ ಪಡೆದು  ಆಡಳಿತ ಹಿಡಿದಿವೆ.

ತುಮ್ಮಿನಕಟ್ಟೆಯಲ್ಲಿ ಶಾಸಕ ಹಾಗೂ ಸಚಿವರ ಬೆಂಬಲಿಗರು, ಕೆಲವರು ಪಕ್ಷೇತರರಾಗಿ ಕಣದಲ್ಲಿದ್ದರು. ಇಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದ್ದರೂ ಸಹ ಅಧಿಕಾರ ಹಿಡಿಯಲು ಇನ್ನೊಬ್ಬರ ಆಶ್ರಯದ ಅವಶ್ಯಕತೆ ಇದೆ. ಇಲ್ಲಿ ಸ್ವತಂತ್ರವಾಗಿ ಯಾರೂ ಆಡಳಿತ ನಡೆಸಲಾಗದು ಎಂದು ಹೇಳಲಾಗುತ್ತಿದೆ.

ಜಯ ಗಳಿಸಿದವರು ಬಣ್ಣ ಎರಚಿ ಸಂಭ್ರಮಿಸಿದರು, ಸೋತವರು ಸೋಲಿನ ಲೆಕ್ಕಾಚಾರ ಹಾಕುತ್ತಾ ವಿರೋಧಿಸಿ ದವರನ್ನು ಶಪಿಸುವ ದೃಶ್ಯಗಳು ಕಂಡು ಬಂದವು. ತಹಶೀ ಲ್ದಾರ್‍ ಶಂಕರ್ ಮತ ಎಣಿಕೆಯ ಉಸ್ತುವಾರಿ ವಹಿಸಿದ್ದರು.

error: Content is protected !!