ಶ್ರೀ ವೀರಭದ್ರೇಶ್ವರ ದೇವಸ್ಥಾನ ಪುಣ್ಯಕ್ಷೇತ್ರವಾಗಿ ಹೊರ ಹೊಮ್ಮಲಿ

ಮಲೇಬೆನ್ನೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಆಶಯ

ಮಲೇಬೆನ್ನೂರು ಜ.26 – ಪಟ್ಟಣದ ಹೊರವಲಯದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಿದ್ದಗೊಳ್ಳುತ್ತಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಭೇಟಿ ನೀಡಿ ವೀಕ್ಷಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಹೆದ್ದಾರಿಗೆ ಹೊಂದಿ ಕೊಂಡಂತೆ ವಿಶಾಲವಾದ ಜಾಗದಲ್ಲಿ ನಿರ್ಮಾಣ ಗೊಂಡಿರುವ ಈ ದೇವಸ್ಥಾನ ಮುಂದೊಂದು ದಿನ ಪುಣ್ಯಕ್ಷೇತ್ರವಾಗಿ ಹೊರ ಹೊಮ್ಮಲಿದೆ ಎಂದು ಭೈರತಿ ಬಸವರಾಜ ಹೇಳಿದರು.

ದೇವಸ್ಥಾನದ ಕಾಮಗಾರಿ ಪೂರ್ಣಗಳಿಸಲು ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಿ, ಅನುದಾನ ನೀಡುವಂತೆ ಮನಿ ಮಾಡುವುದಾಗಿ ಸಂಸದ ರಾಘವೇಂದ್ರ ಭರವಸೆ ನೀಡದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಲ್ಲಿ ವೀರಭದ್ರೇಶ್ವರ ಸೇರಿದಂತೆ ಇತರೆ ದೇವರುಗಳ ಕ್ಷೇತ್ರ ನಿರ್ಮಾಣ ಆಗಿರುವುದು ಸಂತೋಷದ ವಿಷಯ ಎಂದು ಎಂ.ಪಿ ರೇಣುಕಾಚಾರ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಮಾತನಾಡಿ, ಕುಮಾರ ಸ್ವಾಮಿ ಅವರು ಸಿಎಂ ಆಗಿದ್ದಾಗ ಬಜೆಟ್‍ನಲ್ಲಿ ಈ ದೇವಸ್ಥಾನದ ಅಭಿ ವೃದ್ಧಿಗೆ 1 ಕೋಟಿ ರೂ. ಅನುದಾನ ಘೋಷಿಸಿ ದ್ದರು. ಆದರೆ, ಆ ಹಣ ಇನ್ನೂ ಬಿಡುಗಡೆ ಆಗಿಲ್ಲ. ಸಚಿವರು, ಸಂಸದರು ಆ 1 ಕೋಟಿ ರೂ. ಅನುದಾನ ನೀಡಬೇಕೆಂದು ಮನವಿ ಮಾಡಿದರು.

ಜವಳಿ ವರ್ತಕ ಬಿ.ಸಿ. ಉಮಾಪತಿ ಮಾತನಾಡಿ, ಈ ದೇವಸ್ಥಾನ ನಿರ್ಮಾಣಕ್ಕೆ ಬಹಳಷ್ಟು ಜನ ವೈಯುಕ್ತಿಕ ನೆರವು ನೀಡಿದ್ದಾರೆ ನಾನು ಕೂಡ 50 ಲಕ್ಷ ರೂ ದೇಣಿಗೆ ನೀಡಿದ್ದು, ಇನ್ನೂ ಬಳಷ್ಟು ಹಣದ ಅವಶ್ಯಕತೆ ಇದ್ದು, ಸರ್ಕಾರ ಗಮನ ಹರಿಸಬೇಕೆಂದರು. ಜೆಡಿಎಸ್‌ ಜಿಲ್ಲಾಧ್ಯಕ್ಷರೂ, ದೇವಸ್ಥಾನ ಕಮಿಟಿಯ ಸದಸ್ಯರೂ ಆದ ಬಿ.ಚಿದಾನಂದಪ್ಪ ಮಾತನಾಡಿ, ಸುಮಾರು 25-30 ಕೋಟಿ ರೂ.ಗಳ ವೆಚ್ಚದಲ್ಲಿ ಈ ಕ್ಷೇತ್ರ ಅಭಿವೃದ್ದಿ ಪಡಿಸಿದ್ದು, ಇದು ಸರ್ವ ಜನರ ಹಿತ ಕಾಯುವ ಸನ್ನಿಧಿ ಆಗಬೇಕೆಂದು ನಮ್ಮ ಆಶಯವಾಗಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ್‍ ಬೀಳಗಿ, ಜಿ.ಪಂ ಸಿಇಓ ಪದ್ಮ ಬಸವಂತಪ್ಪ, ಎಎಸ್ಪಿ ರಾಜೀವ್, ವಿಭಾಗಧಿಕಾರಿ ಮಮತಾ ಹೊಸ ಗೌಡರ್, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಉಪ ತಹಶೀಲ್ದಾರ್ ಆರ್.ರವಿ, ಪಿಎಸ್‍ಐ ವೀರಬಸಪ್ಪ, ಎಪಿಎಂಸಿ ಸದಸ್ಯ ಜಿ. ಮಂಜುನಾಥ್ ಪಟೇಲ್, ಬಂಡೇರ ತಿಮ್ಮಣ್ಣ, ಕರ್ನಾಟಕ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಡಿ.ಎಸ್.ಅರುಣ್, ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರುಗೇಶ್ ಆರಾಧ್ಯ, ಯಕ್ಕನಹಳ್ಳಿ ಬಸವರಾಜಪ್ಪ, ಕುಂದೂರು ಶಿವಣ್ಣ, ನಿಟ್ಟೂರು ಸಂಜೀವಮೂರ್ತಿ, ಮಾಗಾನಹಳ್ಳಿ ಹಾಲಪ್ಪ, ಎನ್.ಕೆ. ವೃಷಭೇಂದ್ರಪ್ಪ, ಎನ್.ಕೆ ಬಸವರಾಜ್, ಬಿ.ಮಹಾರುದ್ರಪ್ಪ, ಬಿ.ಶಂಭು ಲಿಂಗಪ್ಪ, ಬಿ.ಮಲ್ಲಿಕಾರ್ಜುನ್, ಬಿ.ವಿ.ಸುರೇಶ್, ಹೊನ್ನಾಳಿ ಗಂಗಾಧರ್ ಮತಿತ್ತರರು ಉಪಸ್ಥಿತರಿದರು.

error: Content is protected !!