ಗ್ಯಾಲಾಕ್ಸಿ ಯುವಕ ಸಂಘದ ವತಿಯಿಂದ ರಾಷ್ಟ್ರಪತಿ ಪದಕ ಪುರಸ್ಕೃತ ಎಸಿಪಿ ರುದ್ರಪ್ಪ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪ್ರಶಾಂತ್ ಮುನೋಳಿ
ಸಂತೇಬೆನ್ನೂರು, ಜ. 21- ಪೊಲೀಸ್ ವೃತ್ತಿ ಎಂಬುದು ಜಾಗೃತಿಯಿಂದ ಕಾರ್ಯ ನಿರ್ವಹಿಸುವ ವೃತ್ತಿಯಾಗಿದ್ದು, ಅತಿಯಾದ ಮುಂಜಾಗ್ರತಾ ಕ್ರಮದೊಂದಿಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅದಕ್ಕೆ ಪೂರಕವಾದ ತಾಳ್ಮೆ, ಸಂಯಮ, ಸಮಯ, ಸಂದರ್ಭಗಳಲ್ಲಿನ ನಿರ್ಧಾರಗಳ ಅವಶ್ಯಕತೆ ವೃತ್ತಿಯಲ್ಲಿ ಮೇಳೈಸಿಕೊಂಡು ಕಾರ್ಯ ನಿರ್ವಹಿಸುವುದು ಕಷ್ಟದ ಕೆಲಸ ಎಂದು ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮುನೋಳಿ ತಿಳಿಸಿದರು.
ನಗರದ ಗ್ಯಾಲಾಕ್ಸಿ ಯುವಕ ಸಂಘದ ವತಿಯಿಂದ ರಾಷ್ಟ್ರಪತಿ ಪದಕ ಪಡೆದ ನಿವೃತ್ತ ಎಸಿಪಿ ಎಂ.ಎನ್.ರುದ್ರಪ್ಪ ಅವರಿಗೆ ಏರ್ಪಡಿ ಸಿದ್ದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಆಗಮಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಎನ್. ರುದ್ರಪ್ಪ, ವೃತ್ತಿ ಜೀವನವನ್ನು ಹೆಚ್ಚಾಗಿ ಪ್ರೀತಿಸುವ ನನಗೆ, ನಿವೃತ್ತಿಯ ನಂತರ ನಾಲ್ಕು ದಿನ ಪುನಃ ಯೂನಿಫಾರಂ ಹಾಕುವ ಅವಕಾಶ ಸಿಕ್ಕಿದ್ದು ರಾಷ್ಟ್ರ ಪತಿ ಪದಕ ಪಡೆದ ನಿಮಿತ್ತವಾಗಿ ಎಂದರು.
ಹಾವೇರಿ ಲೋಕಾಯುಕ್ತ ಎಸಿಪಿ ಚಂದ್ರಶೇಖರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚನ್ನಗಿರಿ ತಾಲ್ಲೂಕು ವೃತ್ತ ನಿರೀಕ್ಷಕ ಆರ್.ಆರ್. ಪಾಟೀಲ್, ಪಿಎಸ್ಐ ಶಿವರುದ್ರಪ್ಪ ಮೇಟಿ, ನಿವೃತ್ತ ಡಿವೈಎಸ್ಪಿ ಅಬ್ದುಲ್ ರೆಹಮಾನ್, ಮಾಯಕೊಂಡ ಎಸ್.ಐ. ಮೋಹನ್ ಕುಮಾರ್, ಗ್ರಾಮದ ಹಿರಿಯರಾದ ಎಂ.ಸಿದ್ದಪ್ಪ, ಎಜಾಜ್ ಅಹ್ಮದ್, ಜಿ. ರಂಗಸ್ವಾಮಿ, ಸದಾಶಿವ ಆರಾಧ್ಯ, ಎಂ.ಜೆ. ಸಾಧಿಕ್, ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು. ಕೆ. ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಕೆ.ಸಿ. ನಾಗ ರಾಜ್ ಸ್ವಾಗತಿಸಿದರು. ಮಾರುತಿ ನಿರೂಪಿಸಿದರು.