ದಾವಣಗೆರೆ, ಜ. 21- ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಕಾಯಕ ಯೋಗಿ ಶ್ರೀ ಶಿವಕುಮಾರ ಸ್ವಾಮಿಗಳ ಎರಡನೇ ವರ್ಷದ ಪುಣ್ಯ ಸ್ಮರಣೆ ಯನ್ನು ನಗರದ ಗಡಿಯಾರ ಕಂಬದ ಹತ್ತಿರ ನಡೆಸಲಾಯಿತು.
ಮುಕ್ತಿಮಂದಿರದ ಶ್ರೀ ವಿಮಲ ರೇಣುಕಾ ವೀರ ಮುಕ್ತಿ ಮುನಿ ಶಿವಾಚಾರ್ಯ ಸ್ವಾಮೀಜಿ, ಡಾ.ಕೊಟ್ಟೂರು ಬಸವೇ ಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚನ್ನ ಸಿದ್ದೇಶ್ವರ ಶಿವಾ ಚಾರ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರೂ ಆಗಿರುವ ನಗರ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್, ರಾಷ್ಟ್ರೀಯ ಯುವ ಘಟಕದ ಉಪಾಧ್ಯಕ್ಷ ಸಂದೀಪ್, ಕಾರ್ಯಕಾರಿಣಿ ಸದಸ್ಯ ಶಿವನಗೌಡ ಪಾಟೀಲ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಉಮಾ ರಮೇಶ್, ಪ್ರಧಾನ ಕಾರ್ಯದರ್ಶಿ ದ್ರಾಕ್ಷಾಯಿಣಿ, ನಗರ ಘಟಕದ ಅಧ್ಯಕ್ಷರಾದ ಪುಷ್ಪ ವಾಲಿ, ನಗರ ಘಟಕದ ಪದಾಧಿಕಾರಿಗಳಾದ ಮಂಗಳ, ಗಂಗಾ, ಸುಮಾ ಮಲ್ಲಿಕಾರ್ಜುನ, ಸುನೀತ, ಮಂಜುಳ, ಸುಜಾತ, ಅನ್ನಪೂರ್ಣ, ಮಂಜುಳ ಗದಿಗೇಶ್, ಶಕುಂತಲಮ್ಮ ವೆಂಕಟೇಶ, ಮಂಜುಳ ಮಹಾಂತೇಶ, ರೂಪ ಮರಿಗೌಡರು, ಶಕುಂತಲ, ಆರತಿ ಸೋಗಿ, ಯುವ ಘಟಕದ ಅಧ್ಯಕ್ಷ ಶಂಭು ಉರೇಕೊಂಡಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನೀಲಗುಂದ, ಉಪಾಧ್ಯಕ್ಷರಾದ ಅಭಿಷೇಕ್ ಪಿ.ಎಳೆಹೊಳೆ, ಕೊಂಡಜ್ಜಿ ಶಿವಕುಮಾರ್, ಶಿವರಾಜ್ ದೇವರಮನೆ, ಟಿಂಕರ್ ಮಂಜಣ್ಣ, ಶಿವಾನಂದ ಬೆನ್ನೂರು, ಎಳನೀರು ಮುತ್ತಣ್ಣ, ಬಿ.ಎಸ್. ರಾಘವೇಂದ್ರ ಶೆಟ್ಟಿ, ಪಿ.ಎನ್. ಚಂದ್ರಶೇಖರ್, ಜಯಪ್ರಕಾಶ್ ಮಾಗಿ ಇತರರು ಉಪಸ್ಥಿತರಿದ್ದರು.