ಶಿವು ಉಪ್ಪಾರ್ ಸಾವು ಸಿಬಿಐಗೆ ವಹಿಸಲು ರಾಮಸೇನೆ ಮನವಿ

ದಾವಣಗೆರೆ, ಜ.21- ಗೋ ಪ್ರೇಮಿ ಶಿವು ಉಪ್ಪಾರ್ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

2019 ಮೇ 25ರಂದು ಬೆಳಗಾವಿ ಜಿಲ್ಲೆಯ ಹಿರೇಬಾಗೇ ವಾಡಿ ಎಪಿಎಂಸಿ ಆವರಣದಲ್ಲಿ ಶಿವು ಉಪ್ಪಾರ್ ಶವ ಸಂಶಯಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾ ಗಿತ್ತು. ಪ್ರಕರಣದ ನಿಷ್ಪಕ್ಷಪಾತ ತನಿ ಖೆಗೆ ಆಗ್ರಹಿಸಿ  ಹೋರಾಟ ಕೂಡ ನಡೆದಿತ್ತು. ಆದರೆ ಒಂದೂವರೆ ವರ್ಷ ಕಳೆದರೂ ಇನ್ನೂ ತನಿಖೆ ಪೂರ್ಣಗೊಂಡಿಲ್ಲ. ಶಿವು ಉಪ್ಪಾರ್ ಸಾವಿಗೆ ನಿಖರ ಕಾರಣವೂ ತಿಳಿದು ಬಂದಿಲ್ಲ ಎಂದು ಪ್ರತಿಭಟನಾಕಾ ರರು ಅಸಮಾಧಾನ ವ್ಯಕ್ತಪಡಿಸಿದರು.

ಶಿವು ಉಪ್ಪಾರ್ ಮಾಡಿದ ವಿಡಿಯೋದಲ್ಲಿ ಹೇಳಿದ ಗೋ ಹಂತಕ ಬೆಪಾರಿ 50 ಲಕ್ಷ ಸುಪಾರಿ ಕೊಟ್ಟು ಶಿವುನನ್ನು ಕೊಲ್ಲುವ ಬಗ್ಗೆ ಹೇಳಿದ್ದರೂ ಆತನ ಬಂಧನದ ಬಗ್ಗೆ ಮಾಹಿತಿಯಿಲ್ಲ. ಶಿವು ಹೇಳಿದ ಅನಧಿಕೃತ ಜಾನುವಾರು ಸಾಗಾಟದ ಬಗ್ಗೆ ತನಿಖೆಯಾಗಿಲ್ಲ. ಶಿವು ಉಲ್ಲೇಖಿಸಿದ ವಾಹನಗಳ ಜಪ್ತಿ ಸಹ ಆಗಿಲ್ಲ. ಇವೆಲ್ಲವೂ ಸೇರಿದಂತೆ ಇನ್ನೂ ಮುಂತಾದ ಅಂಶಗಳ ಬಗ್ಗೆ ತನಿಖೆ ನಡೆಯಬೇಕಿತ್ತು. ಆದರೆ ಪ್ರಕರಣವನ್ನು ಮುಚ್ಚಿ ಹಾಕಲು ಕಾಣದ ಕೈಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಮಣಿಕಂಠ, ರಾಜ್ಯ ಸಂಪರ್ಕ ಪ್ರಮುಖ್ ಪರಶುರಾಮ ನಡುಮನಿ, ಮುಖಂಡರಾದ ಡಿ.ಬಿ. ವಿನೋದ ರಾಜ್, ಶ್ರೀಧರ, ಕರಾಟೆ ರಮೇಶ, ಸಾಗರ್, ಮಾರ್ಕಂ ಡೇಯ, ರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!