ಶ್ರೀ ರಾಮ ಮಂದಿರ : ದೇಣಿಗೆ ಸಂಗ್ರಹಕ್ಕೆ ಬೆಂಬಲ

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ

ಹರಪನಹಳ್ಳಿ, ಜ.20- ನೂತನ ಕೃಷಿ ಕಾಯ್ದೆಗಳಿಂದ ರೈತರ ಆದಾಯ ದ್ವಿಗುಣಗೊಳ್ಳುತ್ತದೆ  ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಪಟ್ಟಣದ ಬಿಜೆಪಿ ಮುಖಂಡ ಜಿ.ನಂಜನಗೌಡರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,  ವಿರೋಧ ಪಕ್ಷದವರು ಕೃಷಿ ಕಾಯ್ದೆ ಟೀಕಿಸುತ್ತಾರೆ. ಅವರಿಗೆ ಬೇರೆ ಅಜೆಂಡಾ ಇಲ್ಲ. ಪ್ರತಿಭಟಿಸುವುದು ಅವರ ಹಕ್ಕು ಮಾಡುತ್ತಾರೆ. ಏನೇ ಇದ್ದರೂ ಯಡಿಯೂರಪ್ಪನವರು ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಈಗಿನ ಅವಧಿ ಪೂರ್ಣಗೊಳಿಸುವರು ಎಂದರು.   ಮಂತ್ರಿಯಾಗಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತೆ. ಅವರವರ ಹಕ್ಕು ಪ್ರತಿಪಾದಿಸುತ್ತಾರೆ, ಸಂಪುಟ ವಿಸ್ತರಣೆಯಾಗಿದೆ. ಖಾತೆಗಳ ಹಂಚಿಕೆಯೂ ಆಗುತ್ತೆ, ಉತ್ತಮ ಆಡಳಿತ ನಡೆಸುತ್ತಿರುವ ಯಡಿಯೂರಪ್ಪನವರು ಪೂರ್ಣ ಅವಧಿ ಮುಗಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸುತ್ತಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ನಾನು ಮಾತನಾಡುವುದಿಲ್ಲ, ಅವರು ಹಿರಿಯರಿದ್ದಾರೆ ಎಂದಷ್ಟೆ ಹೇಳಿದರು.

ಶ್ರೀರಾಮ ಜನ್ಮಭೂಮಿ ಕಟ್ಟಡಕ್ಕೆ ಕೇವಲ 3 ದಿನಗಳಲ್ಲಿ ದೇಶಾದ್ಯಂತ 3 ಕೋಟಿ ರೂ. ಸಂಗ್ರಹವಾಗಿದೆ. ದಾವಣಗೆರೆಯಲ್ಲಿ 1 ಕೋಟಿ ರೂ. ಸಂಗ್ರಹವಾಗಿದೆ. ದೇಶದಲ್ಲಿ ಸಾವಿರ ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.

ಹರಪನಹಳ್ಳಿ ತಾಲ್ಲೂಕಿನಲ್ಲಿ ಕೇವಲ 3 ದಿನಗಳಲ್ಲಿ 2 ಲಕ್ಷಕ್ಕಿಂತ ಹೆಚ್ಚು ಸಂಗ್ರಹವಾಗಿದೆ, 13 ಲಕ್ಷ ಸಂಗ್ರಹವಾಗುವ ಗುರಿ ಹೊಂದಲಾಗಿದೆ. ಪ್ರತಿ ಮನೆಗೂ 10 ರೂ. ಆಗಲಿ ಸಂಗ್ರಹಿಸುವ ಯೋಜನೆ ಇದೆ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಲಿದೆ. ಪ್ರತಿಯೊಬ್ಬ ಪ್ರಜೆಗಳೂ ಸ್ಪಂದಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಜಿ.ನಂಜನಗೌಡ ಅವರು ಶ್ರೀರಾಮ ಮಂದಿರಕ್ಕೆ 1.23 ಲಕ್ಷ ರೂ. ದೇಣಿಗೆಯ ಚೆಕ್ ನೀಡಿದರು.

ಬಿಜೆಪಿ ಮುಖಂಡರಾದ  ಆರುಂಡಿ ನಾಗರಾಜ್, ಎಂ.ಪಿ.ನಾಯ್ಕ, ಪಿ.ಮಹಾಬಲೇಶ್ವರಗೌಡ, ಜಿ.ನಂಜನಗೌಡ, ಜಿ.ಪಂ ಸದಸ್ಯೆ ಸುವರ್ಣ ನಾಗರಾಜ್, ಪುರಸಭಾ ಅಧ್ಯಕ್ಷ ಮಂಜುನಾಥ್ ಇಜಂತಕರ, ಜೆ.ಓಂಕಾರಗೌಡ, ಎಚ್.ಎಂ. ಜಗದೀಶ್,
ಡಾ. ರಮೇಶ್‌ಕುಮಾರ್‌,  ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್‌, ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ಪುರಸಭಾ ಸದಸ್ಯರಾದ ಕಿರಣ ಶಾನುಬಾಗ್, ಎಚ್.ಎಂ. ಅಶೋಕ್, ಮಹಿಳಾ ಘಟಕದ ಲತಾ ನಾಗರಾಜ್, ಕುಸುಮಾ ಜಗದೀಶ್, ರೇಖಮ್ಮ, ಮುಖಂಡರಾದ  ಬಿ.ವೈ.ವೆಂಕಟೇಶ್‌ನಾಯ್ಕ, ಗುಂಡಗತ್ತಿ ಮಂಜುನಾಥ್‌, ವೀರೇಶ್ ಹನಗವಾಡಿ ಮತ್ತು ಇತರರು ಹಾಜರಿದ್ದರು.

error: Content is protected !!