ಶಿಕ್ಷಣದ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು

ಹರಪನಹಳ್ಳಿ : ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಜಿ.ಕಾಂತರಾಜ್ ಆಶಯ

ಹರಪನಹಳ್ಳಿ, ಜ.17 – ಹಿಂದುಳಿದ ಜಾತಿ ಜನಾಂಗದವರು ಶಿಕ್ಷಣದಿಂದ ಮಾತ್ರ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಜಿ.ಕಾಂತರಾಜ ಹೇಳಿದರು. 

ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಿನ್ನೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪುರಸ್ಕಾರದಿಂದ ಮಕ್ಕಳ ಬೆಳವಣಿಗೆಗೆ ಪೂರಕವಾದ ಶಕ್ತಿ ಸಿಗುತ್ತದೆ ಆ ನಿಟ್ಟಿನಲ್ಲಿ ಶಿಕ್ಷ ಣದ ಜೊತೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕಿದೆ ಎಂದರು.

ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ಮಾತನಾಡಿ, ವಾಲ್ಮೀಕಿ ನಾಯಕ ನೌಕರರು ಒಂದು ಜಾತಿಗೆ, ಒಂದು ಧರ್ಮಕ್ಕೆ ಸಿಮೀತವಾಗದೆ ಎಲ್ಲಾ ಜಾತಿ, ಜನಾಂಗದ ಅಧ್ಯಕ್ಷರುಗಳನ್ನು ಕರೆಸಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಟಿ.ವಿ., ಮೊಬೈಲ್‍ಗಳಿಂದ ದೂರವಿದ್ದು ತಮ್ಮಗಳ ಗುರಿ ಸಾಧನೆ ಕಡೆ  ಗಮನ ಹರಿಸಬೇಕು. 12ನೇ ಶತಮಾನದ ಬಸವಣ್ಣನವರ ಕನಸನ್ನು ಸಾಕಾರ ಗೊಳಿಸಲು ಇಂತಹ ಕಾರ್ಯಕ್ರಮಗಳು ಅವಶ್ಯವಾಗಿವೆ ಎಂದರು. 

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಸಿದ್ದಲಿಂಗನಗೌಡ ಮಾತನಾಡಿ  ಸಮಾಜದಲ್ಲಿರುವ ಮೂಢನಂಬಿಕೆ, ಬಾಲ್ಯ ವಿವಾಹಗಳು ಕಡಿಮೆಯಾಗುವುದಕ್ಕೆ ಶಿಕ್ಷಣ ಬಹುಮುಖ್ಯವಾಗಿದ್ದು, ತಳ ಸಮುದಾಯಗಳು ಇಂತಹ ಉತ್ತಮ ಕಾರ್ಯ ಮಾಡಿರುವುದು ನನಗೆ ಸಂತಸ ತಂದಿದೆ ಎಂದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಬಸವರಾಜ ಸಂಗಪ್ಪನವರ್ ಮಾತನಾಡಿ, ವರ್ತಮಾನದಲ್ಲಿ  ಭವಿಷ್ಯದ ಕಡೆ ಮುಖ ಮಾಡಿ ನಿಂತಿರುವ ಪ್ರತಿಭಾವಂತ ವಾಲ್ಮೀಕಿ ನಾಯಕ ಸಮಾಜದ ವಿದ್ಯಾರ್ಥಿಗಳು ಸಮಾಜದ ಎಲ್ಲಾ ವರ್ಗಗಳ  ಜೊತೆ ಅನ್ಯೋನ್ಯವಾಗಿ ಬದುಕುವಂತಹ  ನವ ಸಮಾಜವನ್ನು ಕಟ್ಟುವಂತಹ  ಕನಸುಗಳನ್ನು  ಬಿತ್ತುವ ಕಾರಣಕ್ಕಾಗಿ ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು. 

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಜಿ.ಪದ್ಮಲತಾ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಆರ್.ಪದ್ಮರಾಜ್, ಕನಕ ನೌಕರರ ಕ್ಷೇಮಾಭಿವೃದ್ದಿ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ರಾಮಪ್ಪ, ಜಿಲ್ಲಾ ಬಿಜೆಪಿ ಎಸ್.ಟಿ ಘಟಕದ ಉಪಾಧ್ಯಕ್ಷ ಆರ್.ಲೋಕೇಶ್‌ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ತಾಲ್ಲೂಕು ಅಧ್ಯಕ್ಷ ದಾದಾ ಖಲಂದರ್‍, ಮಾತನಾಡಿದರು.

ಪುರಸಭೆ ಉಪಾಧ್ಯಕ್ಷರಾದ ಎನ್.ಭೀಮವ್ವ, ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ದಾದಾಪುರದ ಶಿವಾನಂದ, ಪ್ರಧಾನ ಕಾರ್ಯದರ್ಶಿ ಜಿ.ನಾಗರಾಜ್‍, ಪುರಸಭಾ ಸದಸ್ಯರುಗಳಾದ  ಟಿ.ವೆಂಕೇಶ್, ದ್ಯಾಮಜ್ಜಿ ರೊಕ್ಕಪ್ಪ,  ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ  ಎಂ.ಆಂಜನೇಯ, ವಿವಿಧ ಸಮಾಜದ ಮುಖಂಡರುಗಳಾದ ವಾಮದೇವಪ್ಪ, ಎ.ಎಸ್‍. ಎಂ. ಗುರುಪ್ರಸಾದ್‍, ಶಾನುಭೋಗರ ಸಿದ್ದಪ್ಪ, ಬಿ.ಮಂಜುನಾಥ, ಬಿ.ರಾಜಶೇಖರ, ರೇವಣಸಿದ್ದಪ್ಪ, ಎ.ಕೆ.ಹುಚ್ಚಪ್ಪ, ಬಂಡಿ ಬಸವರಾಜ್‍, ಅರ್ಜುನ ಪರಸಪ್ಪ, ಹೂವಣ್ಣ, ಮಂಜುನಾಥ ಪೂಜಾರ, ಶಿವಾನಂದಗೌಡ, ಎಂ.ರಮೇಶ್‍, ಎಂ.ಕೆ.ಹುಚ್ಚಪ್ಪ, ಕೆ.ಉಸ್ಮಾನ್ ಸಾಹೇಬ್, ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗಪ್ಪ ಎಸ್.ಕಾಟಿ, ಹನುಮಂತಪ್ಪ, ಕೊಟ್ರೇಶ್, ಶಿಕ್ಷಣ ಇಲಾಖೆಯ ಗಿರಜ್ಜಿ ಮಂಜುನಾಥ, ಮುಖಂಡರಾದ ಚಿಕ್ಕೇರಿ ಬಸಪ್ಪ, ಪಟ್ನಾಮದ ನಾಗರಾಜ್‍ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!