ಪುಣ್ಯ ಸ್ಥಳವಾದ ರಾಘವೇಂದ್ರ ಕೃಪಾಶ್ರಮದ ಮುಂದೆ ಭಕ್ತರ ಅಸಮಾಧಾನ

ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಸಿಗದ ಅವಕಾಶ 

ದಾವಣಗೆರೆ, ಜ.15- ಸಂಕ್ರಾಂತಿ ಹಬ್ಬದ ನಿಮಿತ್ತ ದೇವರ ದರ್ಶನ ಮಾಡಲು ಅವಕಾಶ ನೀಡದಿರುವುದಕ್ಕೆ ಭಕ್ತ ಸಮೂಹ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟಿ ಸಿರುವ ಘಟನೆ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ದಲ್ಲಿನ ಪುಣ್ಯ ಸ್ಥಳದಲ್ಲಿ ಗುರುವಾರ ನಡೆದಿದೆ.

ಪುಣ್ಯಸ್ಥಳವಾದ ರಾಘವೇಂದ್ರ ಕೃಪಾಶ್ರಮಕ್ಕೆ ಪ್ರತಿ ವರ್ಷದಂತೆ ಸಂಕ್ರಾಂತಿ ಅಂಗವಾಗಿ ರಾಘವೇಂದ್ರ ಸ್ವಾಮಿ ದರ್ಶನಕ್ಕಾಗಿ ಬಂದಿದ್ದ ವೇಳೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತಲ್ಲದೇ, ಮಠಕ್ಕೆ ಬೀಗ ಹಾಕಿ ಪ್ರವೇಶಕ್ಕೆ ಅನುಮತಿ ನಿರ್ಬಂಧಿಸಲಾಗಿತ್ತು. ಹೀಗೆ ಯಾವುದೇ ಮುನ್ಸೂಚನೆ ಇಲ್ಲದೇ ದೇವರ ದರ್ಶನದ ಅವಕಾಶ ನಿಷೇಧಿಸಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು.

ದಾವಣಗೆರೆ, ಹರಿಹರ, ಚನ್ನಗಿರಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಕುಟುಂಬ ಸಮೇತ ಬಂದಿದ್ದ ನೂರಾರು ಭಕ್ತರು ದೇವರ ದರ್ಶನ ಭಾಗ್ಯ ಸಿಗದೇ ಬೇಸರಗೊಂಡು ಮಠದ ಮುಂಭಾಗ ಪ್ರತಿಭಟಿಸಿ, ದರ್ಶನದ ಅವಕಾಶ ನೀಡುವಂತೆ   ಕೆಲ ಕಾಲ ಬಿಗಿಪಟ್ಟು ಹಿಡಿದಿದ್ದರು. ಕೊನೆಗೂ ದರ್ಶನದ ಅವಕಾಶ ಸಿಗದ ಕಾರಣ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬೇರೆ ದಾರಿ ಹಿಡಿದರು.

ಪ್ರತಿ ವರ್ಷವೂ ಸಂಕ್ರಾಂತಿಯಂದು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲಾಗುತ್ತಿತ್ತು. ಈ ವರ್ಷ ದರ್ಶನಕ್ಕೆ ಅವಕಾಶ ನೀಡದಿರುವುದು ನಿರಾಸೆ ಮೂಡಿಸಿದೆ. ಕೊರೊನಾ ಕಾರಣವಾಗಿದ್ದರೆ ನಾವು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ದೇವರ ದರ್ಶನ ಪಡೆಯುತ್ತಿದ್ದೆವು. ದರ್ಶನಕ್ಕೆ ಅವಕಾಶವಿಲ್ಲದಿ ರುವ ಬಗ್ಗೆ ಮುಂಚಿತವಾಗಿ ಪ್ರಕಟಿಸಬೇಕಿತ್ತು. ಆಗ ನಾವು ಇಲ್ಲಿಗೆ ಬರುವ ಪ್ರಮಯವೇ ಇರುತ್ತಿರಲಿಲ್ಲ ಎಂದು ಪ್ರತಿಭಟನಾ ನಿರತ ಭಕ್ತರು ಆಕ್ಷೇಪಿಸಿದ್ದಾರೆ. 

error: Content is protected !!