ಹರಿಹರದ ಕಾರ್ಯಕ್ರಮದಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯವಾದಿ ಎ. ಹನುಮಂತಪ್ಪ
ಹರಿಹರ, ಜ.12- ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ಜಾರಿಯಾದರೆ ಮಾದಿಗ ಸಮಾಜ ತಕ್ಷಣವೇ ಅಭಿವೃದ್ಧಿ ಕಾಣುವುದಿಲ್ಲ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯವಾದಿ ಎ. ಹನುಮಂತಪ್ಪ ಹೇಳಿದರು.
ನಗರದ ಗುರು ಭವನದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಒಳಮೀಸಲಾತಿ ಜಾರಿಗಾಗಿ ಸರ್ಕಾರಕ್ಕೆ ಮನವಿ, ಕಟ್ಟಡ ಕಾರ್ಮಿಕರ ಕಾರ್ಡ್ ವಿತರಣೆ, ಸಮೃದ್ಧಿ ಪಾಸ್ ಬುಕ್ ವಿತರಣೆ, ಗ್ರಾಮ ಪಂಚಾಯ್ತಿ ನೂತನ ಸದಸ್ಯರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಕೆಲ ಜಾತಿಯ ನಾಯಕರಿಗೆ ಒಳ ಮೀಸಲಾತಿ ಜಾರಿಯಾದರೆ ಮಾದಿಗರು ಮೇಲೆ ಬರುತ್ತಾರೆ ಎನ್ನುವ ಹೆದರಿಕೆ ಇದೆ. ಆದರೆ ಇದು ಒಂದೇ ಬಾರಿಗೆ ಆಗುವ ಪ್ರಕ್ರಿಯೆಯಲ್ಲ. ಜಾರಿಯಾದ ತಕ್ಷಣ ನಾವೇನು ಒಮ್ಮೆಲೇ ಎಲ್ಲಾ ಅಧಿಕಾರಗಳನ್ನು ಪಡೆಯುವುದಿಲ್ಲ. ಅವರುಗಳು ಹೆದರುವ ಕಾರಣವಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಸಮಾಜದ ಬಾಂಧವರು ಮತದಾನ ಮಾಡುವಲ್ಲಿ ಇತ್ತೀಚೆಗೆ ಪ್ರಬುದ್ಧರಾಗಿದ್ದಾರೆ. ಸರ್ಕಾರ ಆಯೋಗದ ವರದಿಯನ್ನು ಜಾರಿಗೊಳಿಸುವಲ್ಲಿ ವಿಳಂಬ ಮಾಡಿದರೆ, ಮುಂಬರುವ ಚುನಾವಣೆಗಳಲ್ಲಿ ಪ್ರಬುದ್ಧರಾಗುವ ನಮ್ಮ ಸಮಾಜದ ಮತದಾರರು ತಮ್ಮ ಪ್ರಬುದ್ಧತೆಯನ್ನು ತೋರಿಸಲಿದ್ದಾರೆ ಎಂದು ಸೂಚ್ಯವಾಗಿ ಸರ್ಕಾರವನ್ನು ಎಚ್ಚರಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ವಹಿಸಿದ್ದರು. ಶಾಸಕ ಎಸ್.ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪ ಸಭಾಪತಿ ಡಾ.ಎಲ್. ಹನುಮಂತಯ್ಯ, ಮಾಜಿ ಶಾಸಕ ಬಿ.ಪಿ. ಹರೀಶ್ ಆಗಮಿಸಿ, ಮಾದಿಗ ಸಮಾಜದ ಇಂದಿನ ಸ್ಥಿತಿಗತಿಗಳ ಬಗ್ಗೆ ಮತ್ತು ಅವರಿಗೆ ಮೀಸಲಾತಿ ದೊರೆಯಲಿ ಎಂಬ ಆಶಯದೊಂದಿಗೆ ಮಾತನಾಡಿದರು.
ತಾ.ಪಂ. ಅಧ್ಯಕ್ಷರಾದ ಶ್ರೀದೇವಿ ಮಂಜಪ್ಪ, ನಗರಸಭೆ ಸದಸ್ಯರಾದ ಎನ್. ರಜನಿಕಾಂತ್, ಎ.ಕೆ.ಹನುಮಂತಪ್ಪ ಆಟೋ, ಹೋರಾಟ ಸಮಿತಿ ಅಧ್ಯಕ್ಷ ವೈ.ಬಿ. ಪ್ರಭಾಕರ್, ಕಾರ್ಯದರ್ಶಿ ಎಂ.ಎಸ್. ಆನಂದ ಕುಮಾರ್, ಸಂಘಟನಾ ಕಾರ್ಯದರ್ಶಿ ನಿಂಗರಾಜ್, ಉಪಾಧ್ಯಕ್ಷ ಕಂಚಿಕೇರಿ ಕೇಶವ, ಮುಖಂಡರಾದ ಎ.ಕೆ. ಭೂಮೇಶ್, ಎಚ್.ನಿಜಗುಣ, ಎಚ್. ಶಿವಪ್ಪ, ಸದಾಶಿವ, ಬಿ. ಕೃಷ್ಣಪ್ಪ, ಬಿ.ಎನ್. ರಮೇಶ್, ಸುರೇಶ್ ತೆರದಹಳ್ಳಿ, ರಾಕೇಶ್ ಪೂಜಾರ್, ಶ್ರೀನಿವಾಸ್, ಸಾವಿ ತ್ರಮ್ಮ, ಕೆಂಚಪ್ಪ ಸೇರಿದಂತೆ ಅನೇಕ ಸಮಾಜದ ಮುಖಂ ಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.