ದಾವಣಗೆರೆ, ಜ.11- ಒಗ್ಗಟ್ಟಿನ ಬಲದಿಂದ ಕರ್ನಾಟಕದಲ್ಲಿ ಕನ್ನಡ ಡಿಂಡಿಮ ಮೊಳಗಿ, ಸಾರ್ವಭೌತ್ವ ಕಾಣಲು ಸಾಧ್ಯ. ಇದಕ್ಕಾಗಿ ಎಲ್ಲಾ ಕನ್ನಡ ಪರ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಆಶಿಸಿದರು.
ನಗರದ ಶಿವಯೋಗ ಮಂದಿರದ ಆವರಣದಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮೊನ್ನೆ ಹಮ್ಮಿಕೊಂಡಿದ್ದ 65ನೇ ಕನ್ನಡ ರಾಜ್ಯೋತ್ಸವ ಹಾಗೂ ಹಾಸ್ಯ ಸಂಜೆ ಮತ್ತು ರಸಮಂಜರಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ದ್ದರೆ ಕನ್ನಡ ಭಾಷೆ ಉಳಿಸಲು, ಕನ್ನಡ ಬಲಿಷ್ಠಗೊಳಿಸಲು, ಕನ್ನಡ ಬಿಟ್ಟು ಬೇರೆ ಭಾಷೆ ಬಳಕೆಯಾಗದಂತೆ ಮಾಡಬಹುದು. ಅಲ್ಲದೇ ಕಚೇರಿಗಳು, ಅಧಿಕಾರಿ ವರ್ಗ, ಬೋರ್ಡ್ ಗಳಲ್ಲೂ ಕನ್ನಡ ರಾರಾಜಿಸುವಂತಾಗಲಿದೆ ಎಂದರು.
ಕನ್ನಡ ನೆಲ-ಜಲ, ನಾಡು-ನುಡಿ ಉಳಿವಿ ಗಾಗಿ ಕನ್ನಡ ಪರ ಸಂಘಟನೆಗಳು ಸಹ ಮುಂ ದೆಯೂ ಒಂದಾಗಿ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು. ಜೊತೆಗೆ ಯಾವುದೇ ಜಾತಿ, ಧರ್ಮ ಭೇದವಿಲ್ಲದೇ ಕನ್ನಡ ಭಾಷೆ ಅರಳಿಸಲು ಕನ್ನಡಿಗರೆಲ್ಲರೂ ಹಿಂದೆ ಮುಂದೆ ನೋಡದೇ ಪಣ ತೊಟ್ಟು ನಿಂತು ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ಪ್ರಸ್ತುತ ಕರ್ನಾಟಕದಲ್ಲಿ ಇನ್ನೂ ನಿಶ್ಚಿತವಾಗಿ ಕನ್ನಡ ಭಾಷೆ ಬಳಕೆಯಾಗಬೇಕು. ಅಚ್ಚ ಕನ್ನಡ ಭಾಷೆ ಬಳಕೆ ದಾವಣಗೆರೆಯಲ್ಲಿ ಹೆಚ್ಚಾಗಿದೆ ಎಂದು ಹೆಮ್ಮೆಪಟ್ಟ ಅವರು, ಕನ್ನಡ ರಾಜ್ಯೋತ್ಸವವನ್ನು ಪ್ರತಿ ವರ್ಷ ಆ ಚರಿಸಿ ಕನ್ನಡಾಂಬೆಯನ್ನು ನೆನೆಯುತ್ತಾ ಕನ್ನಡ ಭಾಷೆ, ಕನ್ನಡತನವನ್ನು ಮೆರೆಸಬೇಕೆಂದರು.
ಬಂಕಾಪುರ ಚನ್ನಬಸಪ್ಪನವರ ಪರಿಸ್ಥಿತಿ ನೋವಿನ ಸಂಗತಿ : ಸಂಸದ
ಹಿಂದೆ ಕನ್ನಡ ನಾಡು-ನುಡಿ, ನೆಲ, ಜಲಕ್ಕಾಗಿ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟು ಹೋರಾಟ ನಡೆಸಿದ ಕನ್ನಡ ಪರ ಹೋರಾಟಗಾರ ಬಂಕಾಪುರ ಚನ್ನಬಸಪ್ಪ ಅವರು ಇಂದಿನ ದಿನಗಳಲ್ಲಿ ಬದುಕಿಗಾಗಿ ಪೇಪರ್ ಹಂಚುವ ಕಾಯಕಕ್ಕೆ ಮುಂದಾಗಿರುವುದು ನೋವಿನ ಸಂಗತಿ. ಹೋರಾಟಕ್ಕಾಗಿ ತಮ್ಮ ಉಂಗುರವನ್ನೇ ಅಡವಿಟ್ಟು ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸಿದ್ದಾರೆ. ಕನ್ನಡದ ಏಳಿಗೆಗಾಗಿ ಪ್ರಾಣ, ಜೀವಮಾನವನ್ನೇ ಮುಡಿಪಾಗಿಟ್ಟ ಹಿರಿಯ ಕನ್ನಡ ಪರ ಹೋರಾಟಗಾರರನ್ನು ಗುರುತಿಸುವ, ಸ್ಮರಿಸುವ ಕೆಲಸವಾಗಬೇಕು.
ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದಿಸುವ ವ್ಯಾಮೋಹ ಪೋಷಕ ರಲ್ಲಿ ಮೂಡಿದೆ ಎಂದು ವಿಷಾದಿಸಿದರಲ್ಲದೇ, ಮಾತೃಭಾಷೆ ಕನ್ನಡವಿ ಲ್ಲದಿದ್ದರೆ ಏನೂ ಸಾಧ್ಯವಿಲ್ಲ. ಹಾಗಾಗಿ ಮಾತೃ ಭಾಷೆಗೆ ಪ್ರಥಮಾಧ್ಯತೆ ನೀಡಬೇಕೆಂದರು.
ದಿವ್ಯ ಸಾನಿಧ್ಯ ವಹಿಸಿದ್ದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಕನ್ನಡ ನಮ್ಮ ಉಸಿರಾಗಬೇಕು. ನಮ್ಮ ಉಸಿರಿ ರುವ ತನಕ ಕನ್ನಡವನ್ನು ಪ್ರೀತಿಸುವುದರೊಂ ದಿಗೆ ರಕ್ಷಿಸಿ, ಉಳಿಸಬೇಕೆಂದರು.
ಶಾಸಕ ಎಸ್.ವಿ. ರಾಮಚಂದ್ರಪ್ಪ, ಮೇಯರ್ ಬಿ.ಜಿ. ಅಜಯ್ ಕುಮಾರ್, ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ತಂಜೀಮ್ ಉಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ಸಾಧಿಕ್ ಪೈಲ್ವಾನ್ ಮಾತನಾಡಿದರು.
ಇದೇ ವೇಳೆ ಹಿರಿಯ ಪತ್ರಕರ್ತರಾದ ಸದಾನಂದ ಹೆಗಡೆ, ವೀರಪ್ಪ ಎಂ. ಬಾವಿ, ಮಧು ನಾಗರಾಜ್ ಕುಂದ ವಾಡ, ಪಿ.ಎಸ್. ಲೋಕೇಶ್, ಟಿ.ಆರ್. ವಿಶ್ವನಾಥ್, ಯಕ್ಷಗಾನ ಕಲಾವಿದ ಕೆ. ರಾಘವೇಂದ್ರ ನಾಯರಿ, ಕನ್ನಡ ಪರ ಹೋರಾಟಗಾರ ಐನೂರು ಸುರೇಶ್, ಕೊರೊನಾ ಪರಿಚಾರಕರುಗಳಾದ ಸಾಜಿದ್ ಅಹಮ್ಮದ್, ಡಿ. ಸೈಯದ್ ರಿಯಾಜ್, ಹಸೀನ್, ಅಹಮ್ಮದ್ ಬಾಷಾ, ಡಾ. ಸಿದ್ದಿಕ್, ದಾವುದ್ ಅವರುಗಳನ್ನು ಸನ್ಮಾನಿಸಲಾಯಿತು.
ಹಾಸ್ಯ ಕಲಾವಿದರಾದ ಮಡೆನೂರು ಮನು ಮತ್ತು ಜಿ.ವಿ. ಪ್ರಸಿದ್ಧಿ ಅವರಿಬ್ಬರೂ ಕನ್ನಡದ ಕೆಲ ನಟರ ಮಿಮಿಕ್ರಿ ಜೊತೆಗೆ ಹಾಸ್ಯದ ಮುಖೇನ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿ ಮನರಂಜಿಸಿದರು.
ವಿಕರವೇ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘಟ ನೆಗಳ ಒಕ್ಕೂಟ ಕರ್ನಾಟಕದ ಅಧ್ಯಕ್ಷ ಚಲಪತಿ ಅಗಲಗುರ್ಕಿ, ಪಾಲಿಕೆ ಸದಸ್ಯರುಗಳಾದ ದೇವರಮನೆ ಶಿವಕುಮಾರ್, ಆರ್.ಎಲ್. ಶಿವಪ್ರಕಾಶ್, ಸೈಯದ್ ಚಾರ್ಲಿ, ಕೆ. ಜಾಕೀರ್ ಅಲಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಜಿಲ್ಲಾ ಬಿಜೆಪಿ ಉಪಾ ಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಕಾಂಗ್ರೆಸ್ ಮುಖಂಡ ಗಣೇಶ್ ಹುಲ್ಮನಿ, ಜಿ.ವಿ. ಗಂಗಾಧರ್, ಪರಶುರಾಮ್ ಬೊಂಗಾಳೆ, ರಾಜೇಂದ್ರ ಗೌಡ್ರು ಸೇರಿದಂತೆ ಇತರರಿದ್ದರು.