ದಾವಣಗೆರೆ,ಮಾ.27- ನಗರದ ಜೇನುಗೂಡು ಮಹಿಳಾ ಸಮಾಜದ ವಾರ್ಷಿಕೋತ್ಸವ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳಿಗೆ ಜನಪದ ಸಮೂಹ ಗೀತೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸೌಮ್ಯ ಸತೀಶ್, ಪ್ರೀತಿ ಮಠದ, ಶಶಿಕಲಾ, ಮಧುಮತಿ, ಶಾಂತ. ಎರಡನೇ ಬಹುಮಾನವನ್ನು ಲಕ್ಷ್ಮಿ ಕೇಶವ, ಮಮತಾ ಕೊಟ್ರೇಶ್, ಸರಿತಾ, ಮಂಜುಳಾ ರಾಘವೇಂದ್ರ, ಪುಷ್ಪಾ ಹಾಗೂ ಮೂರನೇ ಬಹುಮಾನವನ್ನು ವಿಜಯ, ಸುಧಾ, ಮೀನಾಕ್ಷಿ, ಜ್ಯೋತಿ,ಮಂಗಳ ಪಡೆದರು
ಆಂಜನೇಯ ಬಡಾವಣೆ ಯೋಗ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇನುಗೂಡು ಮಹಿಳಾ ಸಮಾಜದ ಅಧ್ಯಕ್ಷೆ ಸುಜಾತ ನಾಗೇಶ್ ವಹಿಸಿದ್ದರು. ಕಾರ್ಯದರ್ಶಿ ಮಧು ಉಮೇಶ್, ತೀರ್ಪುಗಾರರಾಗಿ ವಿದುಷಿ ಶ್ರೀಮತಿ ಮಂಗಳ ಗೌರಿ ಆಗಮಿಸಿದ್ದರು. ಪ್ರಾರ್ಥನೆ ಎಂ. ಪ್ರೀತಿ., ಸ್ವಾಗತ ಶಾಂತಲಾ, ವಂದನೆ ಉಷಾ, ನಿರೂಪಣೆ ನವೀನ ಮಾಡಿದರು.